ವಾರದ ಅಂತರದಲ್ಲಿ ಕರುಗಳಿಗೆ ಜನ್ಮ ನೀಡಿದ ಎಮ್ಮೆ

nrp web
ಹಳಿಯೂರು ಗ್ರಾಮದಲ್ಲಿ ಒಂದು ವಾರದ ಅಂತರದಲ್ಲಿ ಕರುಗಳಿಗೆ ಜನ್ಮ ನೀಡಿದ ಎಮ್ಮೆ.
Published on

ಎನ್.ಆರ್.ಪುರ: ಹಳಿಯೂರು ಗ್ರಾಮದಲ್ಲಿ ಎಮ್ಮೆ ಒಂದು ಕರುವಿಗೆ ಜನ್ಮ ನೀಡಿ ಎಂಟು ದಿನದಲ್ಲಿ ಮತ್ತೊಂದು ಕರುವಿಗೆ ಜನ್ಮ ನೀಡಿದೆ.

ಗ್ರಾಮದ ಸುಧಾಕರ ಗೌಡ ಎಂಬುವರು ಸಾಕಿದ ಎಮ್ಮೆ ವಾರದ ಹಿಂದೆ ಗಂಡು ಕುರುವಿಗೆ ಜನ್ಮ ನೀಡಿತ್ತು. ಮಂಗಳವಾರ ಬೆಳಗ್ಗೆ ಮತ್ತೆ ಗಂಡು ಕರು ಜನಿಸಿದೆ.
ಹಲವಾರು ವರ್ಷಗಳಿಂದ ಜಾನುವಾರು ಸಾಕುತ್ತಿದ್ದೇನೆ. ವಾರದ ನಂತರ ಎಮ್ಮೆ ಮತ್ತೊಂದು ಕರುವಿಗೆ ಜನ್ಮ ನೀಡಿರುವುದು ವಿಶೇಷವಾಗಿದೆ. ಎಮ್ಮೆಗೆ ಕೃತಕ ಗರ್ಭಧಾರಣೆ ಮಾಡಿಸಿಲ್ಲ. ಪಶು ಇಲಾಖೆ ಗಮನಕ್ಕೆ ತಂದಿದ್ದೇನೆ ಎಂದು ಸುಧಾಕರ ಗೌಡ ತಿಳಿಸಿದ್ದಾರೆ.
ಈ ಕುರಿತು ತಾಲೂಕು ಪಶು ವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ. ಶಿವಕುಮಾರ್ ಮಾತನಾಡಿ, ಇಂಥ ಪ್ರಕರಣ ಇದೇ ಮೊದಲು. ಸಾಮಾನ್ಯವಾಗಿ ಹಂದಿಗಳು ಒಂದು ಮರಿ ಹಾಕಿದ ನಂತರ ಒಂದು ವಾರ ಬಿಟ್ಟು ಮತ್ತೊಂದು ಮರಿಗೆ ಜನ್ಮ ನೀಡುತ್ತವೆ. ಆದರೆ ಹಸು, ಎಮ್ಮೆಗಳು ಒಂದೇ ದಿನ ಕರುವಿಗೆ ಜನ್ಮ ನೀಡುತ್ತವೆ. ಹಳಿಯೂರು ಪ್ರಕರಣ ಅಪರೂಪವಾಗಿರುವುದರಿಂದ ಸ್ಥಳಕ್ಕೆ ಹೋಗಿ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net