

ಹುಬ್ಬಳ್ಳಿ: ವಿದ್ಯುತ್ ತಂತಿ ತಗುಲಿ ಎಮ್ಮೆಯೊಂದು ಮೃತಪಟ್ಟ ಘಟನೆ ಇಲ್ಲಿನ ಆನಂದನಗರ ವೃತ್ತದ ಇಂಡಿಪಂಪ್ ಬಳಿ ಮಂಗಳವಾರ ನಡೆದಿದೆ.
ವಿದ್ಯುತ್ ಕಂಬದ ಬಳಿ ಬೆಳೆದಿದ್ದ ಹುಲ್ಲು ಮೇಯಲು ಹೋಗಿದ್ದ ಎಮ್ಮೆಗೆ ವಿದ್ಯುತ್ ತಂತಿ ತಗುಲಿದೆ. ಅಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದೆ. ಹೆಸ್ಕಾಂ ಹಾಗೂ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಂದ ಎಮ್ಮೆ ಮೃತಪಟ್ಟಿತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡೂ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.