ಉಕ ಅಭಿವದ್ಧಿಗೆ ಯಾವುದೇ ಪ್ರಸ್ತಾವನೆಗಳಿಲ್ಲದ ಬಜೆಟ್​

New KCCI New
Published on

ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಅದರಲ್ಲಿಯೂ ವಿಶೇಷವಾಗಿ ಹುಬ್ಬಳ್ಳಿ-ಧಾರವಾಡದ ಅಭಿವೃದ್ಧಿಗೆ ಪೂರಕವಾಗುವಂತಹ ಯಾವುದೇ ಪ್ರಸ್ತಾವನೆ ಮಂಡಿಸಿಲ್ಲ ಎಂದು ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಬೇಸರ ವ್ಯಕ್ತಪಡಿಸಿದೆ.

ಸಂಸ್ಥೆಯ ಸಭಾಂಗಣದಲ್ಲಿ ಟಿವಿ ಮೂಲಕ ಬಜೆಟ್​ ನೇರ ಪ್ರಸಾರವನ್ನು ವೀಸಿದ ಸಂಸ್ಥೆಯ ಪದಾಧಿಕಾರಿಗಳು, ಬಜೆಟ್​ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸಂಸ್ಥೆಯ ಸಭಾಂಗಣದಲ್ಲಿ ಟಿವಿ ಮೂಲಕ ಬಜೆಟ್​ ನೇರ ಪ್ರಸಾರವನ್ನು ವೀಸಿದ ಸಂಸ್ಥೆಯ ಪದಾಧಿಕಾರಿಗಳು, ಬಜೆಟ್​ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು

ಕಿತ್ತೂರ ಮಾರ್ಗವಾಗಿ ಧಾರವಾಡ -ಬೆಳಗಾವಿ ರೈಲು ಮಾರ್ಗ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾತ್ರ ಈ ಬಜೆಟ್​ನಲ್ಲಿ ನಮೂದಿಸಲಾಗಿದೆ. ಎ್​ಎಂಸಿಜಿ ಕ್ಲಸ್ಟರ್​ ಸ್ಥಾಪನೆಗೆ ಇರುವ ತೊಂದರೆಗಳನ್ನು ನಿವಾರಿಸಲು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಜವಳಿ ಪಾರ್ಕ್​ಗಳನ್ನು ಸ್ಥಾಪಿಸಲು ಮತ್ತು ಎಂಎಸ್​ ಎಂ ಇ ಸೆಕ್ಟರ್​ ಬಲವರ್ಧನೆಗೊಳಿಸಲು ಕ್ರಮಕೆಗೊಳ್ಳಬೇಕೆಂದು ಕಳೆದ ತಿಂಗಳು ಮನವಿ ಸಲ್ಲಿಸಿದ್ದರೂ ಈ ಬಜೆಟ್​ ನಲ್ಲಿ ಯಾವುದೇ ಪ್ರಸ್ತಾವನೆಗಳನ್ನು ಸೂಚಿಸದೇ ಇರುವುದು ಈ ಭಾಗದ ಉದ್ದಿಮೆಗಳ ಅಭಿವದ್ಧಿಗೆ ಹಿನ್ನಡೆಯಾಗಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಬಿಆರ್​ಟಿಎಸ್​ ಸಾರಿಗೆ ವ್ಯವಸ್ಥೆಯನ್ನು ರದ್ದುಗೊಳಿಸಿ ಆ ಸ್ಥಳದಲ್ಲಿ ಮೋನೊ ಹಾಗೂ ಮೆಟ್ರೋ ರೆಲು ಸಂಚಾರ ಪ್ರಾರರಂಭಿಸಬೇಕೆಂದು ಸಹ ಮನವಿಯಲ್ಲಿ ಕೋರಲಾಗಿತ್ತು. ಆದರೂ ಈ ಬಜೆಟ್​ ನಲ್ಲಿ ಯಾವುದೇ ಪ್ರಸ್ತಾವನೆಗಳು ಇಲ್ಲದೇ ಇರುವುದು ಆಶ್ಚರ್ಯಕರ ಹಾಗೂ ಖೇದಕರ ಅಂಶವಾಗಿದೆ. ಬಿಆರ್​ಟಿಎಸ್​ನಿಂದ ಆಗುತ್ತಿರುವ ಅನಾನುಕೂಲತೆಗಳ ಬಗ್ಗೆ ಗಮನ ಸೆಳೆದರೂ ಈ ಸರ್ಕಾರವು ಸುಧಾರಣೆ ಕ್ರಮಗಳನ್ನು ಕೆಗೊಳ್ಳಲು ಆಸಕ್ತಿ ತೋರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಸ್ಥೆಯ ಅಧ್ಯ ಎಸ್​.ಪಿ.ಸಂಶಿಮಠ, ಉಪಾಧ್ಯ ಸಂದೀಪ ಬಿಡಸಾರಿಯಾ, ಗೌರವ ಕಾರ್ಯದಶಿರ್ ರವೀಂದ್ರ ಬಳಿಗಾರ, ಜೊತೆ ಗೌರವ ಕಾರ್ಯದಶಿರ್ ಹಾಗೂ ಪತ್ರಿಕಾ ಮಾಧ್ಯಮ ಸಮಿತಿ ಚೇರ್ಮನ್​ ಮಹೇಂದ್ರ ಸಿಂಘಿ, ಮಾಜಿ ಅಧ್ಯರಾದ ಶಂಕರಣ್ಣ ಮುನವಳ್ಳಿ, ವಸಂತ ಲದವಾ, ರಮೇಶ ಪಾಟೀಲ, ತೆರಿಗೆ ಸಮಿತಿ ಕೋ ಚೇರ್ಮನ್​ ಸಿಎ ಚನ್ನವಿರ ಮುಂಗರವಾಡಿ, ಲೆಕ್ಕಪರಿಶೋಧಕ ವೈ.ಎಂ. ಖಟಾವಕರ, ಸದಸ್ಯರಾದ ವೀರಣ್ಣ ಕಲ್ಲೂರ, ಪಿ.ಡಿ. ಬನಸಾಲಿ, ಶಾಂತರಾಜ ಪೋಳ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net