ದಿವಾಳಿ ತೋರಿಸಿದ ಬಜೆಟ್​

31 Dwd 4 Jagadish Shettar
Published on

ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್​ ಆಥಿರ್ಕ ದಿವಾಳಿತನವನ್ನು ತೋರಿಸಿದೆ. ಮೊದಲು ಪ್ರಕಟಿಸಿದ್ದ ಯೋಜನೆಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ್​ ಶೆಟ್ಟರ್​ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರದಂದು ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್​ ಕುರಿತು ಪ್ರತಿಕ್ರಿಯೆ ನೀಡಿರುವ ಶೆಟ್ಟರ್​, ಈಗಿನ ಸರ್ಕಾರ ಬಿಜೆಪಿ ಸರ್ಕಾರದ ಎಲ್ಲ ಯೋಜನೆಗಳಿಗೆ ತಿಲಾಂಜಲಿ ಕೊಟ್ಟಿದೆ. ತಾನೇ ಮತದಾರರಿಗೆ ಕೊಟ್ಟ ಗ್ಯಾರಂಟಿ ಯೋಜನೆಗಳ ದಾರಿ ತಪ್ಪಿಸಿದೆ. ರೈತರು, ಮಹಿಳೆಯರು, ಬಡವರು ಮತ್ತು ಮಧ್ಯಮ ವರ್ಗದವರ ಮೂಗಿಗೆ ತುಪ್ಪ ಸವರಿದೆ ಎಂದು ದೂರಿದ್ದಾರೆ.

ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಗೆ ಸಾಕಷ್ಟು ಅನುದಾನ ಮತ್ತು ಯೋಜನೆ ಪ್ರಕಟಿಸಿಲ್ಲ. ಇದರಿಂದ ಸಾಮಾಜಿಕ ಮತ್ತ್ತು ಪ್ರಾದೇಶಿಕ ಅಸಮತೋಲನ ಎದ್ದು ಕಾಣುತ್ತಿದೆ. ತಾವೇ ಆಥಿರ್ಕ ತಜ್ಞರೆಂದುಕೊಂಡಿದ್ದ ಸಿದ್ದರಾಮಯ್ಯ, ರಾಜ್ಯದ ಹಣಕಾಸಿನ ಹಳಿ ತಪ್ಪಿಸಿದ್ದಾರೆ. ಈ ಬಜೆಟ್​ ನಿಂದ ಯಾರಿಗೂ ಸಂತೃಪ್ತಿ ಸಿಗಲು ಸಾಧ್ಯವಿಲ್ಲ. ಬರೀ ಹಳೆಯ ಯೋಜನೆ ಗಳಿಗೆ ಬಣ್ಣ ಬಳಿದು ಜನರ ಮುಂದಿಟ್ಟಿದೆ ಎಂದು ಆರೋಪಿಸಿದ್ದಾರೆ.

ಬಹುಸಂಖ್ಯಾತರಾದ ಹಿಂದುಗಳಿಗೆ ಅನ್ಯಾಯ ಮಾಡಿ, ಗುತ್ತಿಗೆಯಲ್ಲಿ, ಶಿಕ್ಷಣದಲ್ಲಿ ಸೇರಿ ಎಲ್ಲದರಲ್ಲೂ ಮೀಸಲು ಕೊಟ್ಡು ಬರೀ ಮುಸ್ಲಿಮರ ತುಷ್ಟೀಕರಣ ಮುಂದುವರಿಸಲಾಗಿದೆ. ನೀರಾವರಿಗೆ ಕಿಂಚಿತ್ತು ಅನುದಾನ ಮೀಸಲಿಟ್ಡಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net