ಹೆದರಬೇಡಿ, ಎಲ್ಲವೂ ಒಳ್ಳೆಯದಾಗಲಿದೆ ಎಂದಿದ್ದಾರೆ ಯಡಿಯೂರಪ್ಪ: ಎಂಟಿಬಿ ನಾಗರಾಜ್

mtb bsy
Published on

ಬೆಂಗಳೂರು: ನಾವು ಯಡಿಯೂರಪ್ಪರ ರಾಜೀನಾಮೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಇವರ ನಾಯಕತ್ವ ಒಪ್ಪಿಕೊಂಡು ಬಿಜೆಪಿಗೆ ಬಂದಿದ್ದೇವೆ. ಈಗ ಯಾರೇ ಸಿಎಂ ಆದರೂ ತೊಂದರೆ ಇಲ್ಲ. ಪಕ್ಷ ಮತ್ತು ನಾಡಿಗೆ ಕೆಲಸ ಮಾಡುವ ವ್ಯಕ್ತಿ ಬೇಕು. ಯಾರನ್ನ ಕೈ ಬಿಡ್ತಾರೆ, ಯಾರನ್ನ ಮುನ್ನಡೆಸ್ತಾರೆ ಅನ್ನೋದು ತೀರ್ಮಾನ ಮಾಡಿಲ್ಲ ಎಂದು ಎಂಟಿಬಿ ನಾಗರಾಜ್​ ಹೇಳಿದರು.

ಮೋದಿ ಆಡಳಿತ ವೈಖರಿ, ಅಭಿವೃದ್ಧಿ ಮೆಚ್ಚಿ ಪಕ್ಷಕ್ಕೆ ಬಂದಿದ್ದೇವೆ. ಆಗ ಸಿಎಂ ಬದಲಾವಣೆ ನಿರೀಕ್ಷೆ ಇರಲಿಲ್ಲ. ಈಗ ಮಧ್ಯದಲ್ಲಿ ಬದಲಾವಣೆ ಆಗಿದೆ. ಯಡಿಯೂರಪ್ಪ ಅನೇಕ ಏಳು ಬೀಳುಗಳನ್ನ ಕಂಡವರು. ನನಗೆ ಯಾವುದೇ ಆತಂಕ ಇಲ್ಲ. ಸಚಿವರಾಗಿ ಮಾಡಿದ್ರೂ ಓಕೆ, ಮಾಡದಿದ್ರೂ ಯಾವುದೇ ಬೇಸರ ಇಲ್ಲ. ವಲಸೆ ಶಾಸಕರು ಯಾವುದೇ ಸಭೆ ಮಾಡಿಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಹೈಕಮಾಂಡ್, ದೇಶದಲ್ಲಿ ಮೋದಿ ಹೈಕಮಾಂಡ್ ಎಂದರು.

ಎಚ್‌. ವಿಶ್ವನಾಥ್ ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದಾರೆ. ಅನೇಕ ಆಗು-ಹೋಗುಗಳ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಯಡಿಯೂರಪ್ಪ ನಮಗೆ ಹೆದರಬೇಡಿ. ಎಲ್ಲವೂ ಒಳ್ಳೆಯದಾಗಲಿದೆ ಎಂದು ಹೇಳಿದ್ದಾರೆ. ಸಿಎಂ ರೇಸ್‌ನಲ್ಲಿ ಕೇಳಿ ಮಾಧ್ಯಮದಲ್ಲಿ ಹತ್ತಾರು ಹೆಸರು ಬರ್ತಿದೆ. ಬೆಲ್ಲದ್, ನಿರಾಣಿ, ಜೋಶಿ ಸೇರಿದಂತೆ ಅನೇಕ ಹೆಸರು ಹೇಳಿದ್ದಾರೆ. ವರಿಷ್ಠರು ಯಾರನ್ನಾದ್ರೂ ಸಿಎಂ ಮಾಡಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net