ಕೆಟ್ಟು ನಿಂತಿದ್ದ ಬಸ್‌ಗೆ ಬೆಂಕಿ

17-ANP-P3 BUS FIRE
ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ಬಸ್.
Published on

ಆನಂದಪುರ: ಹೊಸೂರಿನ ರೇಲ್ವೆ ಗೇಟ್ ಬಳಿ ಸೋಮವಾರ ಬೆಳಗ್ಗೆ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಗಜಾನನ ಕಂಪನಿ ಬಸ್ ಇದಾಗಿದ್ದು ಸಾಗರದಿಂದ ಶಿವಮೊಗ್ಗ ಕಡೆ ಸಾಗುತ್ತಿತ್ತು. ರಾತ್ರಿ ಈ ಬಸ್ ಕೆಟ್ಟು ಹೋದ ಕಾರಣ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ಬೆಳಗ್ಗೆ ಆಕಸ್ಮಿವಾಗಿ ಬೆಂಕಿ ಕಾಣಿಸಿಕೊಂಡು ಚಾಲಕ ಕಂಗಾಲಾಗಿದ್ದಾನೆ. ತಕ್ಷಣ ಸಾಗರದ ಅಗ್ನಿ ಶಾಮಕ ಘಟಕ್ಕೆ ಫೋನ್ ಮಾಡಿದ ಕಾರಣ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬಸ್ ಭಾಗಶಃ ಸುಟ್ಟು ಕರಕಲಾಗಿದೆ. ಬೆಂಕಿಗೆ ಕಾರಣ ತಿಳಿದು ಬಂದಿಲ್ಲ. ಬಸ್ ಧಗ ಧಗ ಉರಿಯುತ್ತಿರುವ ದೃಶ್ಯ ಕಂಡು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಎಲ್ಲ ವಾಹನ ಚಾಲಕರು ಆತಂಕಗೊAಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net