ಧನಾತ್ಮಕ ವಿಚಾರಗಳಿಂದ ಉಜ್ವಲ ಭವಿಷ್ಯ

pustaka vitarane
ತೇರದಾಳ ಪಟ್ಟಣದ ಶ್ರೀ ಸಿದ್ಧೇಶ್ವರ ಶಾಲೆಯಲ್ಲಿ ಶಾಲಾ ಆರಂಭೋತ್ಸವದಲ್ಲಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಮುಖ್ಯಶಿಕ್ಷಕಿ ಬಿ.ಜಿ. ಮುದಕಣ್ಣವರ, ಶಿಕ್ಷಕರು ಇದ್ದರು.
Published on

ತೇರದಾಳ: ಪಟ್ಟಣದ ಶ್ರೀ ಸಿದ್ಧೇಶ್ವರ ಶಾಲೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ಶಾಲೆ ಆರಂಭೋತ್ಸವ ಬುಧವಾರ ಸಂಭ್ರಮದಿಂದ ನಡೆಯಿತು. ತಳಿರು ತೋರಣಗಳಿಂದ ಅಲಂಕೃತವಾದ ಶಾಲೆಗೆ ಆಗಮಿಸಿದ ಮಕ್ಕಳನ್ನು ಅದ್ದೂರಿಯಿಂದ ಸ್ವಾಗತಿಸಲಾಯಿತು.

ಶಿಕ್ಷಕ ಬಿ.ಟಿ. ಪತ್ತಾರ ಮಾತನಾಡಿ, ಗುಣಾತ್ಮಕ ಶೈಕ್ಷಣಿಕ ವರ್ಷವೆಂದು ಇಲಾಖೆಯ ಘೋಷವಾಕ್ಯವನ್ನು ಎಲ್ಲರೂ ಮನದಟ್ಟು ಮಾಡಿಕೊಂಡು ಮಕ್ಕಳಿಗೆ ಶಿಕ್ಷಣ ನೀಡಬೇಕು. ಶಿಕ್ಷಣದ ಮಹತ್ವವನ್ನು ಎಲ್ಲೆಡೆಗೂ ಸಾರೋಣ. ವಿದ್ಯಾರ್ಥಿಗಳಾದವರು ನಾನು ತಪ್ಪದೆ ಪ್ರತಿದಿನ ಶಾಲೆಗೆ ಹಾಜರಿರುವೆ ಎಂಬ ಸಂಕಲ್ಪ ಮಾಡಬೇಕು. ನಿತ್ಯದ ಹಾಜರಾತಿಯಿಂದ ಶಿಸ್ತು, ಅಭ್ಯಾಸದತ್ತ ಹೆಚ್ಚಿನ ಒಲವು, ಪ್ರಯತ್ನ, ಆಲೋಚನೆ ಸೇರಿ ಧನಾತ್ಮಕ ವಿಚಾರಗಳಿಂದ ಉಜ್ವಲ ಭವಿಷ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಪ್ರಾಥಮಿಕ ವಿಭಾಗದ ಚೇರ್ಮನ್ ಎಂ.ಕೆ. ಮಿರ್ಜಿ ಅಧ್ಯಕ್ಷತೆ ವಹಿಸಿದ್ದರು.

ಪ್ರೌಢ ವಿಭಾಗದ ಚೇರ್ಮನ್ ಎ.ಸಿ. ಮುಕುಂದ, ಎಂ.ಆರ್. ಮುಕರಿ ಸೇರಿ ಗಣ್ಯರು ಮಕ್ಕಳಿಗೆ ಸರ್ಕಾರ ಕೊಡಮಾಡಿದ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಿದರು. ಬಳಿಕ ಸಿಹಿ ಊಟದೊಂದಿಗೆ ಮಕ್ಕಳು ಸಂತಸಪಟ್ಟರು. ಮುಖ್ಯಶಿಕ್ಷಕಿ ಬಿ.ಜಿ. ಮುದಕಣ್ಣವರ, ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net