

ಲಿಂಗಸುಗೂರು: ದೇವಸ್ಥಾನ, ಗುಡಿ ಗುಂಡಾರ ನಿರ್ಮಾಣದಿಂದ ಧಾರ್ಮಿಕ ಪ್ರಜ್ಞೆ ಹೆಚ್ಚಲಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ತಾಲೂಕಿನ ಕೇಸರಹಟ್ಟಿ ತಾಂಡಾದಲ್ಲಿ ರಮಣಾದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಯುವಕರು ದುಶ್ಚಟಗಳಿಂದ ದೂರವಿದ್ದು, ಶಿಕ್ಷಣವಂತರಾಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದ ಅಭಿವೃದ್ಧಿಗೆ ಮೀಸಲಿಟ್ಟ 25 ಸಾವಿರ ಕೋಟಿ ರೂ.ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಮೀಸಲಿಟ್ಟ 5 ಸಾವಿರ ಕೋಟಿಯಲ್ಲಿ ಈ ಭಾಗದ ಶಾಸಕರಿಗೆ ಕೇವಲ 3 ಸಾವಿರ ಕೋಟಿ ರೂ. ಮಾತ್ರ ಹಂಚಿಕೆ ಮಾಡುತ್ತಿದೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಳ್ಳಲಿದೆ ಎಂದರು.
ವಿಠ್ಠಲ ಮಹಾರಾಜರು, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸನಗೌಡ ಮೇಟಿ, ಪ್ರಮುಖರಾದ ಭೂಪನಗೌಡ ಪಾಟೀಲ್, ಗಿರಿಮಲ್ಲನಗೌಡ ಪಾಟೀಲ್, ನಾರಾಯಣಪ್ಪ ನಾಯ್ಕ, ಜೀವಲೆಪ್ಪ ನಾಯ್ಕ, ವೆಂಕಟೇಶ ರಾಠೋಡ್, ವೀರೇಶ ಪವಾರ್, ನೀಲಪ್ಪ ಪವಾರ್, ಲಾಲಪ್ಪ ರಾಠೋಡ್, ಮೌನೇಶ ಜಾಧವ್, ಆದಪ್ಪ ಮೇಟಿ, ಮೋತಿಲಾಲ್, ರಾಮಣ್ಣ ಪೂಜಾರಿ ಇದ್ದರು.