ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ

ಮಾನ್ವಿ ತಹಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಿಸಲಾಯಿತು. ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್, ಸರ್ವೇ ಇಲಾಖೆ ಅಧಿಕಾರಿ ನೂರುದ್ದೀನ್, ಶಿಕ್ಷಕಿ ಅಂಬಮ್ಮ ಪ್ರತಾಪ್‌ಸಿಂಗ್, ಮೌನೇಶ ರಾಜಲದಿನ್ನಿ,

Published on

ಮಾನ್ವಿ: ದೇಶಕ್ಕಾಗಿ ಜೀವನ ಮುಡುಪಾಗಿಟ್ಟು ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ ಚನ್ನಮ್ಮನ ಆದರ್ಶ ಪಾಲಿಸಬೇಕಿದೆ ಎಂದು ತಹಸೀಲ್ದಾರ್ ಭೀಮರಾಯ ರಾಮಸಮುದ್ರ ಹೇಳಿದರು.

ಪಟ್ಟಣದ ತಹಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಗುರುವಾರ ಹಮ್ಮಿಕೊಂಡಿದ್ದ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಡಿನ ಅನೇಕ ಮಹಿಳೆಯರ ಸಾಧನೆಗಳ ಬಗ್ಗೆ ಇಂದಿನ ವಿದ್ಯಾರ್ಥಿಗಳಿಗೆ ತಿಳಿಸಬೇಕು. ಕೊನೇ ಉಸಿರು ಇರುವವರೆಗೂ ದೇಶಕ್ಕಾಗಿ ಹೋರಾಡಿದ ಚನ್ನಮ್ಮ ಎಲ್ಲರಿಗೂ ಆದರ್ಶ. ಅವರ ಹೋರಾಟದ ಪ್ರತಿಫಲ ನಾವು ಸ್ವಾತಂತ್ರೃರಾಗಿದ್ದೇವೆ ಎಂದರು. ಶಿಕ್ಷಕಿ ಅಂಬಮ್ಮ ಪ್ರತಾಪ್‌ಸಿಂಗ್ ಅವರು ವಿಶೇಷ ಉಪನ್ಯಾಸ ನೀಡಿದರು.

ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್, ಸರ್ವೇ ಇಲಾಖೆ ಅಧಿಕಾರಿ ನೂರುದ್ದೀನ್, ವೀರಶೈವ ಲಿಂಗಾಯತ ತಾಲುಕು ಅಧ್ಯಕ್ಷ ಹರಿಹರ ಪಾಟೀಲ್, ಲಿಂಗಾಯತ ಬಣಜಿಗ ಸಮಾಜದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುಗೌಡ ಗಣೆಕಲ್, ತಾಲೂಕು ಬೇಡ ಜಂಗಮ ಅಧ್ಯಕ್ಷ ಶ್ರೀಧರಸ್ವಾಮಿ, ಪ್ರಮುಖರಾದ ಶ್ರೀಕಾಂತ ಪಾಟೀಲ್, ಬಸಮ್ಮ ಕಮತರ್, ಗಂಗಮ್ಮ ರಾಮದುರ್ಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net