ಕೊಂಬೆ ಬಿದ್ದು ಕಾರು ಜಖಂ

13_05_Mdy_Halguru
Published on

ಹಲಗೂರು: ಸೋಮವಾರ ರಾತ್ರಿ ಬಿರುಗಾಳಿ ಸಹಿತ ಮಳೆ ಬಂದು ಮಹದೇವು ಅವರ ಕಾರಿನ ಮೇಲೆ ಮರದ ಕೊಂಬೆ ಬಿದ್ದು ಜಖಂಗೊಂಡಿದೆ. ಮೂಲತಃ ದಡಮಹಳ್ಳಿ ಗ್ರಾಮದ ನಿವಾಸಿ ಮಹದೇವು ಹಲಗೂರಿನ ನಾಡಕಚೇರಿ ಮುಂಭಾಗ ಪೆಟ್ಟಿಗೆ ಅಂಗಡಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದು, ಸೋಮವಾರ ಸಂಜೆ ಭಾರಿ ಮಳೆ ಹಾಗೂ ಬಿರುಗಾಳಿ ಪರಿಣಾಮ ಅವರ ಅಂಗಡಿಯ ಬಳಿ ಇದ್ದ ಮರದ ಕೊಂಬೆ ಮುರಿದು ಕಾರಿನ ಮೇಲೆ ಬಿದ್ದಿದೆ. ಪರಿಣಾಮ ಮುಂದಿನ ಗ್ಲಾಸ್ ಒಡೆದುಕೊಂಡು ಮರದ ಕೊಂಬೆ ಕಾರಿನೊಳಗೆ ನುಗ್ಗಿ ಪೂರ್ಣ ಜಖಂ ಗೊಂಡಿದೆ. ಸೂಕ್ತ ಪರಿಹಾರ ಕೊಡಿಸಿ ಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net