ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿದ ಬಾಲಕ

25 vikram 2
Published on

ಮಾತು ಕಲಿಯುವ ಎಲ್ಲ ಚಿಕ್ಕ ಮಕ್ಕಳಂತೆ ತೊದಲುತ್ತಾ ಮಾತನಾಡುವ 5 ವರ್ಷದ ಹುಡುಗ ಪ್ರಪಂಚದ 20 ರಾಷ್ಟ್ರಗಳ ಹೆಸರುಗಳನ್ನು ಕೇವಲ ಆ ದೇಶದ ಬಾವುಟಗಳಿಂದಲೇ ಕಂಡು ಹಿಡಿಯುತ್ತಾನೆ. ಅಲ್ಲದೆ, ಅನೇಕ ಸ್ವಾತಂತ್ರೃ ಹೋರಾಟಗಾರರನ್ನು ಸರಿಯಾಗಿ ಗುರುತಿಸುವ ಪುಟ್ಟ ಬಾಲಕ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರು ದಾಖಲಿಸಿಕೊಂಡಿದ್ದಾನೆ.
ನಗರದ ಪವನ ಶಾಲೆಯ ಯುಕೆಜಿ ವಿದ್ಯಾರ್ಥಿ ಆದ್ಯಂತ ಗಡಾದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದ್ದಾನೆ. ಈ ಬಾಲಕ 100 ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಸರಳವಾಗಿ ಉತ್ತರಿಸಬಲ್ಲ. 25 ಶ್ಲೋಕ, ಗಾದೆ, ವಚನಗಳನ್ನು ಹೇಳಬಲ್ಲ. 20 ರಾಷ್ಟ್ರಗಳ ಧ್ವಜಗಳನ್ನು, 22 ಸ್ವಾತಂತ್ರೃ ಹೋರಾಟಗಾರರನ್ನು, ಕರ್ನಾಟಕದ ನದಿಗಳನ್ನು, ಜ್ಞಾನಪೀಠ ಪ್ರಶಸ್ತಿ ವಿಜೇತರು, ದೇಶದ ಎಲ್ಲ ರೂಪಾಯಿ ನೋಟುಗಳು ಹಾಗೂ ನಾಣ್ಯಗಳನ್ನು, 25 ವಾಹನಗಳನ್ನು, 25 ಆ್ಯಕ್ಷನ್ ಕ್ರಿಯಾಪದಗಳನ್ನು ಕ್ಷಣಮಾತ್ರದಲ್ಲಿ ಗುರುತಿಸಬಲ್ಲ. ಇದಲ್ಲದೆ ಪುರಾಣದ ಪಾತ್ರಗಳ ಹೆಸರನ್ನು ವರ್ಣಮಾಲೆಯ ಕ್ರಮದಲ್ಲಿ ಹೇಳುವ ಸಾಮರ್ಥ್ಯ ಹೊಂದಿದ್ದಾನೆ. ಈ ಬಾಲಕನ ನೆನಪಿನ ಶಕ್ತಿ ಗುರುತಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯು ತನ್ನ ರೆಕಾರ್ಡ್ ಬುಕ್‌ನಲ್ಲಿ ಈತನ ಹೆಸರನ್ನು ಇತ್ತೀಚೆಗೆ ಸೇರ್ಪಡೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net