ಸಿಡಿಲು ಬಡಿದು ಕುರಿಗಾಯಿ ಬಾಲಕ ಸಾವು

IMG-20250519-WA0010
Published on

ರಾಯಚೂರು

ಜಿಲ್ಲೆಯ ಅರಕೇರಾ ತಾಲೂಕಿನ ಭೋಗಿರಾಮನಗುಂಡ ಗ್ರಾಮದಲ್ಲಿ ಸಿಡಿಲು ಬಡಿದು ಕುರಿಗಾಹಿ ಬಾಲಕ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ಜರುಗಿದೆ.

ಕುರಿಗಾಹಿ ಹನುಮಗೌಡ ಬಾಲಪ್ಪ ನಾಯಕ ಮುದಕಿ (16) ಮೃತ ಬಾಲಕ.

ಗ್ರಾಮದ ಹೊರ ವಲಯದಲ್ಲಿ ಶಂಕರಬಂಡಿ ಹೊಲದಲ್ಲಿ ಕುರಿ ಮೇಯಿಸುತ್ತಿರುವ ವೇಳೆ ಮಳೆ,ಗಾಳಿ ಪ್ರಾರಂಭಗೊಂಡಿದೆ. ತಕ್ಷಣವೇ ಎಲ್ಲಾ ಕುರಿಗಳನ್ನು ಒಂದು ಕಡೆ ಕೂಡಿ ಹಾಕುತ್ತಿರುವ ಸಂದರ್ಭದಲ್ಲಿ ಸಿಡಿಲು ಬಡಿದೆ. ಬಾಲಕ ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ ಎನ್ನಲಾಗಿದೆ.

ಜಾಲಹಳ್ಳಿ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net