ಚಾರ್ಚ್‌ಗೆ ಇಟ್ಟಿದ್ದ ಮೊಬೈಲ್‌ನಿಂದ ಶಾಕ್ ತಗುಲಿ ಬಾಲಕ ಸಾವು

Boy dead
Published on

ಉಪ್ಪಿನಂಗಡಿ: ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಚಾರ್ಚ್‌ಗೆ ಇಟ್ಟಿದ್ದ ಮೊಬೈಲ್‌ನಿಂದ ವಿದ್ಯುತ್ ಶಾಕ್ ತಗುಲಿ 9ನೇ ತರಗತಿ ಬಾಲಕ ಮಂಗಳವಾರ ಮೃತಪಟ್ಟಿದ್ದಾನೆ.
ಅಡ್ಡಹೊಳೆ ನಿವಾಸಿ ಮೋನುಚ್ಚ ಎಂಬುವರ ಪುತ್ರ ರೋಫಿನ್(15) ಮೃತಪಟ್ಟ ಬಾಲಕ. ಮಧ್ಯಾಹ್ನ ಮನೆಯಲ್ಲಿ ಚಾರ್ಜ್‌ಗೆ ಇಟ್ಟಿದ್ದ ಮೊಬೈಲ್ ತೆಗೆಯುತ್ತಿದ್ದಂತೆ ವಿದ್ಯುತ್ ಶಾಕ್ ತಗುಲಿ ಗಂಭೀರ ಗಾಯಗೊಂಡಿದ್ದನು. ಮನೆಯವರು ಆಸ್ಪತ್ರೆಗೆ ದಾಖಲಿಸಿದರೂ, ಅದಾಗಲೇ ಮೃತಪಟ್ಟಿದ್ದನು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net