ಮೊಬೈಲ್ ಫೋನ್ ಬಿಡು ಎಂದಿದ್ದಕ್ಕೆ ಬಾಲಕ ಆತ್ಮಹತ್ಯೆ

crime
Published on

ಹುಬ್ಬಳ್ಳಿ: ಮೊಬೈಲ್ ಫೋನ್ ಬಳಕೆ ಮಾಡಬೇಡ ಎಂದು ಪಾಲಕರು ತಿಳಿಹೇಳಿದ್ದಕ್ಕೆ ಮನನೊಂದು ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಯ ಭೈರಿದೇವರಕೊಪ್ಪದಲ್ಲಿ ಸೋಮವಾರ ನಡೆದಿದೆ.
ಸಮೃದ್ಧ (13) ಮೃತ ಬಾಲಕ. ಸರಿಯಾಗಿ ವಿದ್ಯಾಭ್ಯಾಸ ಮಾಡು. ಮೊಬೈಲ್ ಫೋನ್ ಬಳಕೆ ಬಿಡು ಎಂದು ಪಾಲಕರು ತಿಳಿ ಹೇಳಿದ್ದಾರೆ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡ ಬಾಲಕ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net