ರೈಲಿಗೆ ಸಿಲುಕಿ ಬಾಲಕ ಆತ್ಮಹತ್ಯೆ

crime
Published on

ನಂಜನಗೂಡು: ಮಾನಸಿಕವಾಗಿ ನೊಂದಿದ್ದ ಪತ್ರಿಕೆ ಹಂಚುವ ಬಾಲಕ ತಾಲೂಕಿನ ಬಸವನಪುರ ಸಮೀಪ ರೈಲ್ವೆ ಅಂಡರ್ ಪಾಸ್ ಬಳಿ ಸೋಮವಾರ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಗರದ ಲಯನ್ಸ್ ಶಾಲೆಯ ಸಮೀಪವಿರುವ ಚನ್ನಕೇಶವ ಲೇಔಟ್ ನಿವಾಸಿ ದಫೇದಾರ್ ಶಿವಕುಮಾರ್ ಹಾಗೂ ಶಿಕ್ಷಕಿ ನಂದಿನಿ ದಂಪತಿ ಪುತ್ರ ಕಿರಣ್(17) ಮೃತ. ಈತ ನಂಜನಗೂಡಿನ ಜೆಎಸ್‌ಎಸ್ ಪಾಲಿಟೆಕ್ನಿಕ್‌ನಲ್ಲಿ ದ್ವಿತೀಯ ವರ್ಷದ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದು, ಜತೆಗೆ ಪತ್ರಿಕೆ ಹಂಚುವ ಕೆಲಸವನ್ನೂ ಮಾಡುತ್ತಿದ್ದ. ವ್ಯಾಸಂಗದ ಕಡೆಗೆ ಸರಿಯಾಗಿ ಗಮನ ಹರಿಸುತ್ತಿಲ್ಲ ಎಂದು ಮನೆಯವರು ಆತನಿಗೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ನೊಂದು ಬೆಳಗ್ಗೆ 5.30ಕ್ಕೆ ಚಾಮರಾಜನಗರ ಕಡೆಗೆ ತೆರಳುವ ರೈಲಿಗೆ ಬಸನವಪುರ ಸಮೀಪ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಮೈಸೂರು ರೈಲ್ವೆ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net