ಸ್ವಚ್ಛ ಸರ್ವೆಕ್ಷಣ ಸಮೀಕ್ಷೆಗೆ ನೀರಸ ಪ್ರತಿಕ್ರಿಯೆ

BBMP
Published on

ಬೆಂಗಳೂರು: ಸ್ವಚ್ಛ ಸರ್ವೆಕ್ಷಣ ಸಮೀಕ್ಷೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಕಳೆದ ಬಾರಿಗಿಂತ ಎರಡೂವರೆ ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಅಭಿಪ್ರಾಯ ಹಂಚಿಕೊಂಡಿರುವುದು ಬಿಬಿಎಂಪಿ ಸಮಾಧಾನಕ್ಕೆ ಕಾರಣವಾಗಿದೆ.

ಸರ್ವೆಯಲ್ಲಿ ಅತಿ ಹೆಚ್ಚು ಅಂಕ ಪಡೆಯಬೇಕು ಎಂದು ಹಲವು ರೀತಿಯ ಪ್ರಯತ್ನ ನಡೆಸಿತ್ತು. ಸಾರ್ವಜನಿಕರು ಭಾಗವಹಿಸಿ ಅಭಿಪ್ರಾಯ ಹಂಚಿಕೊಳ್ಳಲು ಜ. 31ಕೊನೆಯ ದಿನವಾಗಿತ್ತು. 1 ಲಕ್ಷ ಜನ ಅಭಿಯಾನದಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿತು. ಆದರೆ, 50,672 ಜನ ಮಾತ್ರ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹೆಚ್ಚು ಅಂಕ ಗಳಿಸಲು ಆಯುಕ್ತ ಬಿ.ಎಚ್.ಅನಿಲ್​ಕುಮಾರ್, ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್, ಜಂಟಿ ಆಯುಕ್ತ ಸರ್ಫರಾಜ್ ಖಾನ್ ತಮ್ಮ ವೈಯಕ್ತಿಕ ಫೇಸ್​ಬುಕ್ ಹಾಗೂ ಟ್ವಿಟರ್ ಖಾತೆಗಳಲ್ಲೂ ಅಭಿಯಾನ ನಡೆಸಿದ್ದರು. 1.3 ಲಕ್ಷ ಜನ ಭಾಗವಹಿಸುವಂತೆ ಮಾಡುವ ಉದ್ದೇಶದಿಂದ ಜಾಹೀರಾತು, ಹಾಡು ಹಾಗೂ ಜಾಗೃತಿ ಜಾಥಾಗಳನ್ನು ಕೂಡ ನಡೆಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net