ವಿಶ್ವಪ್ರಜ್ಞೆ ಮೂಡಿಸಲು ಪುಸ್ತಕಗಳು ಸಹಕಾರಿ :ಸಾಹಿತಿ ಅಬ್ದುಲ್ ರಶೀದ್

A book launch event was held at St. Philomena's College.
Published on

ಮೈಸೂರು: ಪ್ರತಿಯೊಬ್ಬರು ವಿಶ್ವಪ್ರಜ್ಞೆ ಬೆಳೆಸಿಕೊಳ್ಳಲು ಸಮಾಜಮುಖಿ ಮತ್ತು ಜೀವಪರವಾದ ಸಾಹಿತ್ಯ ಕೃತಿಗಳನ್ನು ಓದಬೇಕು ಎಂದು ಸಾಹಿತಿ ಅಬ್ದುಲ್ ರಶೀದ್ ಹೇಳಿದರು.

ನಗರದ ಸಂತ ಫಿಲೋಮಿನಾ ಕಾಲೇಜು ಕನ್ನಡ ವಿಭಾಗ, ನವಕರ್ನಾಟಕ ಪ್ರಕಾಶನ ವತಿಯಿಂದ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೇದ್ರೆ ಮಂಜುನಾಥ ರಚನೆಯ ‘ಡೂಡಲ್ ಗೂಗಲ್ ಅಂಕಲ್ ಜೊತೆ ಮಾತುಕತೆ’, ಪ್ರೊ.ಬಿ.ಎಸ್. ಜೈಪ್ರಕಾಶ್, ಪ್ರೊ.ಆರ್.ವೇಣುಗೋಪಾಲ್ ರಚನೆಯ ‘ಪಂಚಭೂತಗಳ ರಸಾಯನಿಕ ವೈವಿಧ್ಯ’ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ಸಾಕಷ್ಟು ಒಳ್ಳೆಯ ಪುಸ್ತಕಗಳು ಇವೆ. ಅದೇ ರೀತಿ ಕೆಟ್ಟ ಪುಸ್ತಕಗಳು ಸಹ ಇವೆ. ಯಾವುದು ಒಳ್ಳೆಯದ್ದು ಹಾಗೂ ಯಾವುದು ಕೆಟ್ಟದ್ದು ಎಂದು ನಿರ್ಧರಿಸಬೇಕಾಗಿರುವುದು ಓದುಗರು. ಪಂಪ, ಕುಮಾರವ್ಯಾಸ, ಕುವೆಂಪು, ಜಲಾಲುದ್ದೀನ್ ರೂಮಿ, ಟಾಲ್ಸ್‌ಟಾಯ್, ದಾಸ್ತೋವಸ್ಕಿ ಸೇರಿದಂತೆ ಪ್ರಪಂಚದ ಶ್ರೇಷ್ಠ ಕವಿಗಳ ಸಾಹಿತ್ಯವನ್ನು ಓದಿದಾಗ ಜಗತ್ತಿನ ಬಗ್ಗೆ ತಲೆಂುಲ್ಲಿ ತುಂಬಿರುವ ಕೃತಕ ಆಲೋಚನೆಗಳು ಇಲ್ಲವಾಗುತ್ತವೆ. ಇನ್ನೊಬ್ಬರ ಭಾಷೆ, ಸಂಸ್ಕೃತಿ, ವೇಷಭೂಷಣ, ಆಹಾರ ಸಂಸ್ಕೃತಿಯ ಮೇಲೆ ಆಕ್ರಮಣ ಮಾಡುವ ಮನೋಭಾವನೆ ಇಲ್ಲವಾಗಿ ಒಳಗೊಳ್ಳುವ ಪ್ರಜ್ಞೆ ಮೂಡುತ್ತದೆ ಎಂದು ಹೇಳಿದರು.

ಭಾಷೆಗಳ ಬಗ್ಗೆ ಯಾರೂ ಅಹಂಕಾರಪಡುವ ಅಗತ್ಯವಿಲ್ಲ. ಏಕೆಂದರೆ ಭಾಷೆ ನಮ್ಮ ಮನಸ್ಸಿನ ಅನಿಸಿಕೆ ವ್ಯಕ್ತಪಡಿಸಲು ಇರುವ ವಾಧ್ಯಮವಾಗಿದೆ. ಹೆಚ್ಚು ಭಾವನಾತ್ಮಕವಾಗಿರುವುದು ಉಳಿದವರ ಬಗ್ಗೆ ತಾತ್ಸಾರ ಬೆಳೆಂುುವಂತೆ ಮಾಡುತ್ತದೆ. ಮನುಷ್ಯ ಪಾರದರ್ಶ ಕವಾಗಿದ್ದಾಗ ಎಲ್ಲರನ್ನೂ ಮುಕ್ತವಾಗಿ ಸ್ವೀಕರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಂತ ಫಿಲೋಮಿನಾ ಕಾಲೇಜಿನ ರೆಕ್ಟರ್ ಡಾ.ಲೂರ್ದ್ ಪ್ರಸಾದ್ ಜೋಸೆಫ್, ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ಎನ್.ಕೆ.ಸತ್ಯನಾರಾಯಣ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎ.ಟಿ.ಸದೆಬೋಸ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net