ಹೊಸ ಸಂಸ್ಕೃತಿಗೆ ಒತ್ತು ನೀಡುವ ಪುಸ್ತಕ ಪರಿಷೆ

30 bnk 3
Published on

ಬಣಕಲ್: ಗ್ರಾಮೀಣ ಪ್ರದೇಶದಲ್ಲಿ ಮರೆಯಾಗುತ್ತಿರುವ ಪರಿಶೆ ಪದವು ಇತ್ತೀಚೆಗೆ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ ಎಂದು ಚಿಂತಕ ಚಟ್ನಳ್ಳಿ ಮಹೇಶ್ ಹೇಳಿದರು.

ಇತ್ತೀಚೆಗೆ ಜರುಗಿದ ನೀಲಕುರಿಂಜಿ ಕಾರ್ಯಕ್ರಮದಲ್ಲಿ ಪುಸ್ತಕ ಪರಿಷೆಯ ಭಿತ್ತಿಪತ್ರ ಅನಾವರಣಗೊಳಿಸಿ ಮಾತನಾಡಿ, ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ಆತಂಕದ ನಡುವೆಯೂ ಬೆಂಗಳೂರಿನಲ್ಲಿ ಪುಸ್ತಕ ಸಂತೆ ಎಂದು, ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ಪುಸ್ತಕ ಪರಿಷೆ ಎನ್ನುವ ಕಾರ್ಯಕ್ರಮದ ಮೂಲಕ ಪುಸ್ತಕ ಸಂಸ್ಕೃತಿಗೆ ಹೆಚ್ಚಿನ ಒತ್ತು ಕೊಡುವ ಮೂಲಕ ಓದುಗರಿಗೆ ಜ್ಞಾನದ ಅರಿವನ್ನು ವಿಸ್ತರಿಸುವ ಮತ್ತು ಬರಹಗಾರರಿಗೆ ಬರೆಯುವ ಕೌಶಲ್ಯ ತುಂಬುವ ವಿನೂತನ ಪ್ರಯೋಗವನ್ನು ಕನಸುಗಳ ಇನ್ಫಿನಿಟಿ ಮತ್ತು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಮಂಜುಳಾ ಮಾತನಾಡಿ, ಪರಿಷೆ

ಎನ್ನುವುದು ಹಳೆ ತಲೆಮಾರಿಗೆ ಚಿರಪರಿಚಿತ ಪದವಾದರೂ ಇಂದಿನ ಹೊಸ ತಲೆಮಾರಿಗೆ ಪರಿಶೆಯ ಪದ ಪ್ರಯೋಗದ ಪರಿಚಯ ಮಾಡಿಕೊಡಬೇಕಿದೆ. ಪರಿಶೆ ಎನ್ನುವುದಕ್ಕೆ ನಿಘಂಟಿನಲ್ಲಿ ಬಹಳಷ್ಟು ಅರ್ಥಗಳಿದ್ದರೂ ಅದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಜನರ ನಂಬಿಕೆ ಮತ್ತು ಪರಂಪರೆಯನ್ನು ಬಿಂಬಿಸುವ ಸಂಭ್ರಮವೇ ಪರಿಶೆ. ಪುಸ್ತಕ ಪ್ರಪಂಚದಲ್ಲಿ ಈ ರೀತಿಯ ಹಬ್ಬಗಳು ನಡೆಯುತ್ತಿರುವುದು ಕ್ರಿಯಾಶೀಲತೆ ಮತ್ತು ಹೊಸ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದರು.

ವಿಮರ್ಶಕ ಡಾ.ಎಚ್.ಎಸ್.ಸತ್ಯನಾರಾಯಣ, ಗಾಯಕ ನಾದಮಣಿ ನಾಲ್ಕೂರು, ಆಯೋಜಕ ಪೃಥ್ವಿ ಸೂರಿ, ನಂದೀಶ್ ಬಂಕೇನಹಳ್ಳಿ, ಲೇಖಕ ಶ್ರೀನಿವಾಸ ನಾಯ್ಡು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net