ಮನದ ಕತ್ತಲೆ ಕಳೆಯುವ ದೀಪೋತ್ಸವ

NRGL DEEPOSTVA
Published on

ನರೇಗಲ್ಲ: ದೀಪವು ಜ್ಞಾನದ ಸಂಕೇತ. ದೀಪದಿಂದ ಹೊರಡುವ ಬೆಳಕು ಮನದ ಕತ್ತಲೆಯನ್ನು ಕಳೆದು ಶಾಂತಿ ಕೊಡುತ್ತದೆ. ಅದಕ್ಕಾಗಿಯೇ ದೀಪೋತ್ಸವದ ಪರಿಕಲ್ಪನೆಯನ್ನು ನಮ್ಮ ಹಿರಿಯರು ನೀಡಿದ್ದಾರೆ ಎಂದು ಹೆಬ್ಬಳ್ಳಿ ಚೈತನ್ಯಾಶ್ರಮದ ದತ್ತಾವಧೂತ ಮಹಾರಾಜರು ಹೇಳಿದರು.

ಪಟ್ಟಣದ ಶ್ರೀ ನಾರಾಯಣ ದೇವಸ್ಥಾನದಲ್ಲಿ ಚಂಪಾಷಷ್ಠಿಯ ದಿನ ದೀಪೋತ್ಸವಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿ, ಹಿರಿಯರು ಹಬ್ಬಗಳನ್ನು ಮಾಡಿರುವುದೇ ವೈಜ್ಞಾನಿಕ ತಳಹದಿ ಮೇಲೆ. ಪ್ರತಿ ಹಬ್ಬಕ್ಕೂ ತನ್ನದೇ ಆದ ವಿಶಿಷ್ಟ ಅರ್ಥವಿದೆ. ಅದನ್ನು ತಿಳಿದುಕೊಂಡು ಹಬ್ಬಗಳನ್ನು ಆಚರಿಸಿದರೆ ನಮಗೆ ಸಿಗುವ ಆನಂದ ಅವರ್ಣನೀಯ ಎಂದರು. ಅರ್ಚಕ ಕೃಷ್ಣಾ ಗ್ರಾಮಪುರೋಹಿತ, ಆನಂದ ಕುಲಕರ್ಣಿ, ಆದರ್ಶ ಕುಲಕರ್ಣಿ, ಹರೀಶ ಕುಲಕರ್ಣಿ, ಆಪೇಕ್ಷಾ ಕುರಂದವಾಡ ಸೇರಿ ಅನಸೂಯಾ ಮಹಿಳಾ ಮಂಡಳದ ಸದಸ್ಯರು ಇದ್ದರು. ನಿವೃತ್ತ ಉಪನ್ಯಾಸಕ ಎಸ್.ಎಚ್. ಕುಲಕರ್ಣಿ, ಮಂಜುನಾಥ ಗ್ರಾಮಪುರೋಹಿತ ಹಾಗೂ ಆದರ್ಶ ಕುಲಕರ್ಣಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net