ಮೈಸೂರಿನಲ್ಲಿ ಗಮನ ಸೆಳೆದ ದೇಹದಾರ್ಢ್ಯ ಸ್ಪರ್ಧೆ

A bodybuilding competition that attracted attention in Mysore
Published on

ಮೈಸೂರು: ಜಿ.ಎಚ್.ಫಿಟ್ನೆಸ್ ಅಂಡ್ ಜಿಮ್, ಲಯನ್ಸ್ ಕ್ಲಬ್ ಆಫ್ ಮೈಸೂರು ಗೋಲ್ಡನ್ ಸಿಟಿ, ಜಿಲ್ಲಾ ಅಮೆಚೂರ್ ಬಾಡಿಬಿಲ್ಡರ್ಸ್‌ ಅಸೋಸಿಯೇಷನ್ ಹಾಗೂ ಭುವನ್‌ರಾಜ್ ಫೌಂಡೇಶನ್ ವತಿಯಿಂದ ಕ್ರೀಡಾ ದಿನಾಚರಣೆ ಪ್ರಯುಕ್ತ ನಗರದ ಜಗನ್ಮೋಹನ ಅರಮನೆಯಲ್ಲಿ ಶುಕ್ರವಾರ ಒಡೆಯರ್ ಕಪ್ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು.

ವೇದಿಕೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ, ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಘಟಕದ ಅಧ್ಯಕ್ಷ ನಾಗರಾಜ್ ವಿ.ಬೈರಿ, ಕಾಂಗ್ರೆಸ್ ಮುಖಂಡ ಕವೀಶ್ ಗೌಡ, ಭುವನ್ ರಾಜ್ ಫೌಂಡೇಶನ್ ಸಂಸ್ಥಾಪಕ ಎನ್.ಚೇತನ್ ರಾಜ್, ಜಿ.ಎಚ್.ಫಿಟ್ನೆಸ್ ಅಂಡ್ ಜಿಮ್ ಮಾಲೀಕ ಇ.ಹರೀಶ್, ಲಯನ್ಸ್ ಆಫ್ ಮೈಸೂರು ಗೋಲ್ಡನ್ ಸಿಟಿ ಕಾರ್ಯದರ್ಶಿ ಸುರೇಶ್ ಗೋಲ್ಡ್, ಜಿಲ್ಲಾ ಅಮೆಚೂರ್ ಬಾಡಿ ಬಿಲ್ಡರ್ಸ್‌ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನವೀನ್ ಚಂದ್ರ, ನಟ ಲಕ್ಷ್ಮೀಪತಿ ಬಾಲಾಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net