ಕಸದ ರಾಶಿಯಲ್ಲಿ ರುಂಡವಿಲ್ಲದ ದೇಹ ಪತ್ತೆ!

FotoJet
Published on

ಚಿಂತಾಮಣಿ: ನಗರದ ಅಶ್ವಿನಿ ಬಡಾವಣೆಯಲ್ಲಿ ಜೆಸಿಬಿ ಮಾಲೀಕನ ಕೊಲೆ ಸ್ಥಳಿಯರನ್ನು ಬೆಚ್ಚಿ ಬೀಳಿಸಿದ ಬೆನ್ನಲ್ಲೇ ವೆಂಕಟೇಶ್ವರ ಬಡಾವಣೆಯ ಯಾಜ್ಞವಲ್ಕ್ಯ ಮಂದಿರದ ಸಮೀಪ ನಿವೇಶನದಲ್ಲಿದ್ದ ಕಸದ ರಾಶಿಯಲ್ಲಿ ರುಂಡವಿಲ್ಲದ ದೇಹ ಪತ್ತೆಯಾಗಿದೆ. ವ್ಯಕ್ತಿಯನ್ನು ಕೊಲೆ ಮಾಡಿ ದೇಹವನ್ನು ಕಸದ ರಾಶಿಗೆ ಎಸೆದಿದ್ದು, ಗುರುವಾರ ರಾತ್ರಿ ಶವಪತ್ತೆಯಾಗಿದೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಗೌಡತಾಗನಗುಡ್ಡ ಗ್ರಾಮದ ಮುನಿಯಪ್ಪ (60) ಕೊಲೆಯಾದವರು ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡುತ್ತಿದ್ದ ಮುನಿಯಪ್ಪ, ವೆಂಕಟಮ್ಮ ಎಂಬುವರನ್ನು ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ನಂತರ ಮಂಗಮ್ಮ ಎಂಬುವರನ್ನು ಮುನಿಯಪ್ಪ ಎರಡನೇ ಮದುವೆಯಾಗಿದ್ದು, ಅವರಿಗೂ ಮೂವರು ಮಕ್ಕಳಿದ್ದಾರೆ. 25 ವರ್ಷಗಳಿಂದ ಮಂಗಮ್ಮ ಜತೆ ಶ್ರೀನಿವಾಸಪುರ ತಾಲೂಕಿನ ಗೌನಪಲ್ಲಿ ಸಮೀಪದ ತಿಮ್ಮನಪಲ್ಲಿ ಗ್ರಾಮದಲ್ಲಿ ವಾಸವಿದ್ದರು ಎನ್ನಲಾಗಿದೆ.

ಮೃತನ ದೇಹ ರುಂಡವಿಲ್ಲದ ಸ್ಥಿತಿಯಲ್ಲಿ ಬಿದ್ದಿದ್ದರೆ, ಹಾಳುಬಿದ್ದ ಮನೆಯ ಪಕ್ಕ ರಕ್ತದ ಕಲೆಗಳು ಕಂಡುಬಂದಿರುವುದು ಅನುಮಾನಗಳಿಗೆ ಎಡೆಮಾಡಿದೆ. ನಗರಠಾಣೆ ಪೊಲೀಸರು, ಬೆರಳಚ್ಚು ತರು ಪರಿಶೀಲನೆ ನಡೆಸಿದ್ದು, ಮೃತ ಧರಿಸಿದ್ದ ಬಟ್ಟೆಯ ಜೇಬಿನಲ್ಲಿ ಚಿಕ್ಕಪುಸ್ತಕ ಹಾಗೂ ಮೊಬೈಲ್​ ೋನ್​ ಸಿಕ್ಕಿದ್ದು, ಪುಸ್ತಕದಲ್ಲಿದ್ದ ಮೊಬೈಲ್​ ನಂಬರ್​ ಮೂಲಕ ಮೃತನ ವಿಳಾಸ ಪತ್ತೆಹಚ್ಚಲಾಗಿದೆ. ಸ್ಥಳಕ್ಕೆ ಧಾವಿಸಿದ ಮೃತನ ಸಂಬಂಧಿಕರು ಶವದ ಗುರುತು ಪತ್ತೆ ಹಚ್ಚಿದರು. ಮುನಿಯಪ್ಪನ ಮೊದಲ ಪತ್ನಿಯ ಪುತ್ರ ವೆಂಕಟರೆಡ್ಡಿ, ತಂದೆ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಎರಡನೇ ಪತ್ನಿಯ ಮಗ ಶಿವರಾಜು ಮೇಲೆ ಶಂಕೆ ವ್ಯಕ್ತಪಡಿಸಿದ್ದಾನೆ. ಇತ್ತೀಚೆಗೆ ಮುನಿಯಪ್ಪ ಹಾಗೂ ಶಿವರಾಜು ನಡುವೆ ಗಲಾಟೆ ನಡೆದಿತ್ತು. ಆತನೇ ಕೊಲೆ ಮಾಡಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಿವೈಎಸ್​ಪಿ ಪಿ. ಮುರಳೀಧರ್​, ಪೊಲೀಸ್​ ಇನ್​ಸ್ಪೆಕ್ಟರ್​ ವಿಜಿಕುಮಾರ್​, ಪಿಎಸ್​ಐ ನಾರಾಯಣಸ್ವಾಮಿ ಸ್ಥಳ ಪರಿಶೀಲಿಸಿದರು.

  • ಕೂಲಿ ಕಾರ್ಮಿಕನನ್ನು ಕೊಲೆ ಮಾಡಿ ಎಸೆದಿರುವ ಶಂಕೆ
  • ಎರಡನೇ ಪತ್ನಿ ಮಗನ ಮೇಲೆ ಅನುಮಾನ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net