ಪ್ಲೇಟ್‌ನಲ್ಲಿ ರಕ್ತಸಿಕ್ತ ಮಹಿಳೆ..!

mysore
Published on

ಮೈಸೂರು: ವಿಶ್ವ ಆಹಾರ ದಿನಾಚರಣೆ ಅಂಗವಾಗಿ ಪೇಟಾ ಮತ್ತು ವೀಗನ್ಸ್ ಆಫ್ ಮೈಸೂರು ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ನಗರದ ದೊಡ್ಡ ಗಡಿಯಾರದ ಬಳಿ ಸಸ್ಯಾಹಾರ ಕುರಿತು ಜಾಗೃತಿ ಮೂಡಿಸಲಾಯಿತು.

ರಕ್ತಸಿಕ್ತ ಮಹಿಳೆಯನ್ನು ಪ್ಲೇಟ್‌ನಲ್ಲಿ ಬಡಿಸುವ ಕಲ್ಪಿತ ಪ್ರದರ್ಶನ ನೀಡುವ ಮೂಲಕ ಸಾರ್ವಜನಿಕರ ಗಮನ ಸೆಳೆಯಲಾಯಿತು. ಮಾಂಸಾಹಾರ ತ್ಯಜಿಸಿ, ಸಸ್ಯ ಆಧಾರಿತ ಆಹಾರ ಶೈಲಿ ಅನುಸರಿಸಬೇಕು ಎಂದು ಅರಿವು ಮೂಡಿಸಿದರು.

ಮಾಂಸ ತಿನ್ನುವುದು ಎಂದರೆ ಚಿತ್ರಹಿಂಸೆಗೊಳಗಾದ ಮತ್ತು ಸಾಯಲು ಬಯಸದ ಪ್ರಾಣಿಯ ಶವವನ್ನು ತಿನ್ನುವುದು. ಪ್ರಾಣಿಗಳನ್ನು ದುಃಖಕರ ಜೀವನ ಮತ್ತು ಭಯಾನಕ ಮರಣವನ್ನು ಉಳಿಸಲು ಉತ್ತಮ ಮಾರ್ಗವೆಂದರೆ ಸಸ್ಯಾಹಾರ ಪದ್ಧತಿ ಪಾಲನೆ ಮಾಡುವುದು ಎಂದು ಪೇಟಾ ಸಂಸ್ಥೆಯ ಸಂಯೋಜಕ ಅಥರ್ವ ದೇಶಮುಖ್ ಹೇಳಿದರು.

2019ರಿಂದ 2021ರವರೆಗೆ ನಡೆದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ 15ರಿಂದ 49 ವರ್ಷ ವಯಸ್ಸಿನ ಜನಸಂಖ್ಯೆಯ ಶೇ.81 ಜನರು ಮಾಂಸ ಸೇವಿಸುತ್ತಾರೆ. ಆದ್ದರಿಂದ ಸಸ್ಯಾಹಾರ ತಿನ್ನುವ ಕಡೆಗೆ ಜಾಗತಿಕ ಬದಲಾವಣೆ ಅಗತ್ಯವಾಗಿದೆ ಎಂದರು. ಸಂಘಟನೆಯ ಹಿರಾಜ್ ಲಾಲಜಾನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net