

ಹುಬ್ಬಳ್ಳಿ: ನಕಲಿ ಇನ್ಸ್ಟಾಗ್ರಾಂ ಅಕೌಂಟ್ ತೆರೆದ ಯುವಕನೊಬ್ಬ, ಇಲ್ಲಿನ ಅರಿಹಂತ ನಗರದ ಯುವತಿಯೊಂದಿಗೆ ಸಂಪರ್ಕ ಬೆಳೆಸಿ ಚಾಟ್ ಮಾಡಿದ್ದಾನೆ. ನಂತರ ಅವಳ ಅಕೌಂಟ್ನಲ್ಲಿದ್ದ ಭಾವಚಿತ್ರಗಳನ್ನು ಡೌನ್ಲೋಡ್ ಮಾಡಿಕೊಂಡು ಮುಖದ ಕೆಳಗೆ ಬೇರೆ ಮಹಿಳೆಯ ನಗ್ನ ವಿಡಿಯೋ ಅಂಟಿಸಿದ್ದಾನೆ. ಮರಳಿ ಯುವತಿಗೆ ಕಳುಹಿಸಿ ಹಣಕ್ಕಾಗಿ ಬ್ಲ್ಯಾಕ್ವೆುೕಲ್ ಮಾಡಿದ್ದಾನೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.