ಮಡಿಕೇರಿಯಲ್ಲಿ ಸಿದ್ದರಾಮಯ್ಯಗೆ ತಟ್ಟಿದ ಪ್ರತಿಭಟನೆ ಬಿಸಿ! ಕಾರಿನತ್ತ ಮೊಟ್ಟೆ ಎಸೆದು ಆಕ್ರೋಶ

New Project(1)
Published on

ಕೊಡಗು: ಮಡಿಕೇರಿಗೆ ಆಗಮಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಪ್ರತಿಭಟನೆ ಬಿಸಿ ತಟ್ಟಿದೆ. ಮಡಿಕೇರಿಯ ಜನರಲ್​ ತಿಮ್ಮಯ್ಯ ಸರ್ಕಲ್​ನಲ್ಲಿ ಸಿದ್ದರಾಮಯ್ಯರ ಕಾರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ತ್ರಿವರ್ಣ ಧ್ವಜ ಹಿಡಿದು ಸಾವರ್ಕರ್​ ಪರ ಘೋಷಣೆ ಕೂಗುತ್ತಾ ಸಿದ್ದರಾಮಯ್ಯರತ್ತ ಮೊಟ್ಟೆ ಎಸೆದು ಆಕ್ರೋಶ ಹೊರಹಾಕಿದರು.

ಪ್ರಕೃತಿ ವಿಕೋಪ ಪೀಡಿತ ಪ್ರದೇಶ ವೀಕ್ಷಿಸಿ ಬರುತ್ತಿದ್ದ ಸಿದ್ದರಾಮಯ್ಯರನ್ನು ಅಡ್ಡಗಟ್ಟಿದ ಬಿಜೆಪಿ ಮತ್ತು ಹಿಂದು ಸಂಘಟನೆ ಕಾರ್ಯಕರ್ತರು, GO BACK ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು. ಸಿದ್ದರಾಮಯ್ಯ ಅವರಿಗೆ ಮುಜುಗರ ಉಂಟು ಮಾಡುವ ಬೆಳವಣಿಗೆ ನಡೆದಿದ್ದು, ಮಡಿಕೇರಿಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತು.

ಕೊಡಗು ಜಿಲ್ಲೆಗೆ ಗುರುವಾರ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ ಎಂದು ಮೊದಲೇ ತಿಳಿದ ಬಿಜೆಪಿ ಕಾರ್ಯಕರ್ತರು, ಕೊಡಗಿಗೆ ಬರಬೇಡಿ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭಿಸಿದ್ದರು. ಸಿದ್ದರಾಮಯ್ಯ ಟಿಪ್ಪುವನ್ನು ಬೆಂಬಲಿಸುತ್ತಿರುವುದನ್ನು ಖಂಡಿಸಿದ್ದಾರೆ. ಸಿದ್ದರಾಮಯ್ಯ 'ಸಿದ್ದರಾಮಯ್ಯ ಟಿಪ್ಪುವಿನ ಶಿಷ್ಯ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಬೆಂಕಿ ಹಚ್ಚಿ ಕೊಡಗಿಗೆ ಏಕೆ ಬರ್ತಾರೆ ಎಂದು ಸಿದ್ದರಾಮಯ್ಯಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗೋ ಬ್ಯಾಕ್ ಎಂದು ಸೋಷಿಯಲ್ ಮೀಡಿಯಾನದಲ್ಲಿ ಸಿದ್ದು ಬರುವಿಕೆಯನ್ನು ವಿರೋಧಿಸಿ ಪೋಸ್ಟ್​ಗಳು ಹರಿದಾಡಲಾರಂಭಿಸಿತ್ತು. ಇಷ್ಟಾದರೂ ಮಡಿಕೇರಿಗೆ ಆಗಮಿಸಿದ ಸಿದ್ದರಾಮಯ್ಯಗೆ ಪ್ರತಿಭಟನೆ ಬಿಸಿ ತಟ್ಟಿದೆ. ಪರಿಸ್ಥಿತಿಯನ್ನು ಪೊಲೀಸರು ತಿಳಿಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net