ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಅತ್ಯಗತ್ಯ

A BJP government at the center is essential
ತೋಳಮಟ್ಟಿ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪ್ರಚಾರ ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಹಣಮಂತ ನಿರಾಣಿ ಮಾತನಾಡಿದರು. ಮಲ್ಲಿಕಾರ್ಜುನ ಅಂಗಡಿ, ವಿ.ಜಿ. ರೇವಡಿಗಾರ ಇದ್ದರು.
Published on

ಬೀಳಗಿ: ದೇಶದ ಸಮಗ್ರ ಅಭಿವೃದ್ಧಿ ಹಾಗೂ ಸುರಕ್ಷತೆಗಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಅಗತ್ಯವಾಗಿದೆ ಎಂದು ವಿಧಾನ ಪರಿಷತ್ ಶಾಸಕ ಎಚ್.ಆರ್. ನಿರಾಣಿ ಹೇಳಿದರು.

ತಾಲೂಕಿನ ತೋಳಮಟ್ಟಿ ಗ್ರಾಮದಲ್ಲಿ ಭಾನುವಾರ ಲೋಕಸಭೆ ಚುನಾವಣೆ ಅಂಗವಾಗಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಅವರು ಮಾತನಾಡಿದರು.

ಸಮರ್ಥ ಸರ್ಕಾರ, ಸಮರ್ಥ ಪ್ರಧಾನಮಂತ್ರಿ ಬೇಕೆಂದು ಜನರು ಪಕ್ಷಾತೀತ ಹಾಗೂ ಧರ್ಮಾತೀತ ಬೆಂಬಲ ನೀಡುವ ಮೂಲಕ ಬಿಜೆಪಿಗೆ ಮತ ನೀಡಿ 5ನೇ ಬಾರಿಗೆ ಪಿ.ಸಿ. ಗದ್ದಿಗೌಡರನ್ನು ಗೆಲ್ಲಿಸಲಿದ್ದಾರೆ ಎಂದರು.

ಸುಧೀರ್ಘವಾಗಿ ರಾಜಕಾರಣದಲ್ಲಿದ್ದರೂ ಯಾವುದೇ ಕಪ್ಪು ಚುಕ್ಕೆ ಅಂಟಿಸಿಕೊಳ್ಳದೆ ಪ್ರಾಮಾಣಿಕ ರಾಜಕಾರಣಿಯಾಗಿರುವ ಪಿ. ಸಿ. ಗದ್ದಿಗೌಡರ ಕೇಂದ್ರ ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಮೂಲಕ ಸಂಸದ ರತ್ನ ಪ್ರಶಸ್ತಿಗೆ ಭಾಜನರಾಗಿದ್ದು ಹೆಮ್ಮೆಯ ಸಂಗತಿ. ದೇಶದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದ್ದು, ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.

ಜೆಡಿಎಸ್ ಮುಖಂಡ ವೀರೇಂದ್ರ ಶೀಲವಂತ ಮಾತನಾಡಿ, ಪಿ. ಸಿ. ಗದ್ದಿಗೌಡರ 5ನೇ ಬಾರಿಗೆ ಗೆದ್ದು ನರೇಂದ್ರ ಮೋದಿ ಸರ್ಕಾರದಲ್ಲಿ ಕಾನೂನು ಮಂತ್ರಿಯಾಗಲಿದ್ದು, ಸಂಭಾವಿತ, ಸರಳತೆಗೆ ಹೆಸರಾಗಿರುವ ಶುದ್ಧ ಹಸ್ತದ ರಾಜಕಾರಣಿ ಪಿ.ಸಿ. ಗದ್ದಿಗೌಡರ ಗೆಲುವು ಕಟ್ಟಿಟ್ಟ ಬುತ್ತಿ ಎಂದರು.

ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಅಂಗಡಿ, ವಿ.ಜಿ. ರೇವಡಿಗಾರ, ನ್ಯಾಯವಾದಿ ಎಂ. ಬಿ. ಬೂಸರಡ್ಡಿ, ಮುತ್ತಪ್ಪ ಯಡಹಳ್ಳಿ, ಗುರುನಾಥ ಹಿರೇಮಠ, ಸಂತೋಷ ಸಜ್ಜನ, ಶ್ರೀಶೈಲ ಯಂಕಂಚಿಮಠ, ಮಲ್ಲಪ್ಪ ಭಾವಿ, ಭೀಮಣ್ಣ ಕುಂಬಾರ, ಮುತ್ತಪ್ಪ ಯರಗಲ್, ಕುಮಾರ ಹಿರೇಮಠ, ಪೂಜಾ ಗದ್ದಿಗೌಡರ, ವಿದ್ಯಾ ಬಾವಿ, ಶಿವಪ್ಪ ಬಾವಿ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net