

ಮಂಜುನಾಥ ಎಸ್. ಅಂಗಡಿ ಧಾರವಾಡ
ಲೋಕಸಭೆ ಚುನಾವಣೆ ಈ ವರ್ಷದ ಪ್ರಮುಖ ರಾಜಕೀಯ ಘಟನಾವಳಿ. ಧಾರವಾಡ ಕ್ಷೇತ್ರವನ್ನು 4 ಬಾರಿ ಪ್ರತಿನಿಽಸಿ ಕೇಂದ್ರ ಸಚವರಾಗಿದ್ದ ಪ್ರಲ್ಹಾದ ಜೋಶಿ ಮತ್ತೊಮ್ಮೆ ಅಭ್ಯರ್ಥಿಯಾಗಿ ಸತತ 5ನೇ ಬಾರಿ ವಿಜಯಿಯಾದರು.
ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಅಳೆದೂ ತೂಗಿ ಯುವ ಮುಖಂಡ ವಿನೋದ ಅಸೂಟಿಗೆ ಟಿಕೆಟ್ ನೀಡಿತ್ತು. ಪ್ರಭಾವಿ ನಾಯಕ ಜೋಶಿ ಎದುರು ಕಣಕ್ಕಿಳಿದ ಅಸೂಟಿ ತೀವ್ರ ಪೈಪೋಟಿ ನೀಡಿದ್ದು ವಿಶೇಷ. ಕಾಂಗ್ರೆಸ್ ಪಾಳಯದಲ್ಲಿ ಒಗ್ಗಟ್ಟು ಪ್ರದರ್ಶನದ ಫಲವಾಗಿ ಕಾಂಗ್ರೆಸ್ ಅಭ್ಯರ್ಥಿ ಸೋತರೂ ಜೋಶಿಯವರು 1 ಲಕ್ಷ ಮತ ಮುನ್ನಡೆ ಸಾಽಸದಿವುದು ಬಿಜೆಪಿ ವಲಯದಲ್ಲಿ ಚರ್ಚೆಯ ವಿಷಯವಾಗಿತ್ತು.
* ದಿಂಗಾಲೇಶ್ವರ ಶ್ರೀ ಪ್ರಹಸನ: ಶಿರಹಟ್ಟಿ ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಲೋಕಸಭೆ ಚುನಾವಣಾ ಅಖಾಡಕ್ಕಿಳಿದಿದ್ದರು. ಪ್ರಲ್ಹಾದ ಜೋಶಿ ವಿರುದ್ಧ ಬಹಿರಂಗವಾಗಿ ಹರಿಹಾಯ್ದಿದ್ದ ಸ್ವಾಮೀಜಿ, ಅವರನ್ನು ಸೋಲಿಸುವುದೇ ಗುರಿ ಎಂದು ಘೋಷಿಸಿದ್ದರು. ಭಕ್ತರ ಪಡೆಯೊಂದಿಗೆ ನಾಮಪತ್ರ ಸಲ್ಲಿಸಿ ಚುನಾವಣಾ ಅಖಾಡ ಪ್ರವೇಶಿಸಿದ್ದರು. ಕೊನೇ ಘಳಿಗೆಯಲ್ಲಿ ನಾಮಪತ್ರ ವಾಪಸ್ ಪಡೆದು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದು ಪ್ರಹಸನದಂತಾಗಿತ್ತು.
* ಶೆಟ್ಟರ್ ಬೆಳಗಾವಿಗೆ:
2023ರ ವಿಧಾನಸಭೆ ಚುನಾವಣೆಯಲ್ಲಿ ಹು-ಧಾ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರಿ ಸ್ಪಽðಸಿದ್ದರು. ಅವರ ಸೋತರೂ ಕಾಂಗ್ರೆಸ್ ಸರ್ಕಾರ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಿತ್ತು. ಲೋಕಸಭೆ ಚುನಾವಣೆಗೂ ಕೆಲ ತಿಂಗಳು ಮೊದಲು ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಮರಳಿ `ಬಿಜೆಪಿ ಗೂಡು' ಸೇರಿದ್ದರು. ಅವರಿಗೆ ಧಾರವಾಡ ಲೋಕಸಭಾ ಟಿಕೆಟ್ ಸಿಗಲಿದೆ ಎಂಬ ಮಾತು ಕೇಳಿಬಂದರೂ ಹೈಕಮಾಂಡ್ ನಿರ್ಧಾರವೇ ಬೇರೆಯಾಗಿತ್ತು. ಬೆಳಗಾವಿ ಲೋಕಸಭಾ ಟಿಕೆಟ್ ಘೋಷಿಸಿದ್ದರಿಂದ ಶೆಟ್ಟರ್ ಬೆಳಗಾವಿಗೆ `ಗುಳೆ' ಹೋಗಬೇಕಾಯಿತು. ಬೆಳಗಾವಿಯಿಂದ ಗೆಲುವು ಸಾಽಸಿ ಮೊದಲ ಬಾರಿ ಪಾರ್ಲಿಮೆಂಟ್ ಪ್ರವೇಶಿಸಿದರು.
* ಖಾದ್ರಿಗೆ ಹೆಸ್ಕಾಂ ಅಧ್ಯಕ್ಷ ಪಟ್ಟ:
ಶಿಗ್ಗಾಂವಿಯ ಅಜೀಂಪೀರ ಖಾದ್ರಿ ಅವರಿಗೆ ಧಾರವಾಡ ಒಳಗೊಂಡು 7 ಜಿಲ್ಲೆಗಳ ವ್ಯಾಪ್ತಿಯ ಹೆಸ್ಕಾಂ ಅಧ್ಯಕ್ಷ ಪಟ್ಟ ಒಲಿಯಿತು. ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿ0ದ ನಾಮಪತ್ರ ಸಲ್ಲಿಸಿದ್ದ ಖಾದ್ರಿ ಅವರನ್ನು ಮನವೊಲಿಸಿದ ಕಾಂಗ್ರೆಸ್ ನಾಯಕರು, ಬಸವರಾಜ ಬೊಮ್ಮಾಯಿ ಪುತ್ರನನ್ನು ಸೋಲಿಸಿ ಯಾಸೀರಖಾನ್ ಪಠಾಣ್ ಅವರನ್ನು ಗೆಲ್ಲಿಸುವ ಟಾಸ್ಕ್ ಕೊಟ್ಟಿದ್ದರು. ಪಠಾಣ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಖಾದ್ರಿಗೆ ಕಾಂಗ್ರೆಸ್ ಹೈಕಮಾಂಡ್ ಬಹುದೊಡ್ಡ ಹುದ್ದೆಯನ್ನೇ ನೀಡಿತು. ಇದೇ ಮೊದಲ ಬಾರಿ 7 ಜಿಲ್ಲೆಗಳ ವ್ಯಾಪ್ತಿಯ ಹೆಸ್ಕಾಂ ಅಧ್ಯಕ್ಷ ಹುದ್ದೆ ಸೃಷ್ಟಿಸಿ ಅಜೀಂಪೀರ್ ಖಾದ್ರಿ ಅವರಿಗೆ ವಹಿಸಲಾಯಿತು.
* ಪ್ರತ್ಯೇಕ ಪಾಲಿಕೆ ಚಿಗುರಿದ ಕನಸು:
ಹು-ಧಾ ಮಹಾನಗರ ಪಾಲಿಕೆಯನ್ನು ಇಬ್ಭಾಗಿಸಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸುವ ಸಂಬAಧ ವರ್ಷಗಟ್ಟಲೇ ಹೋರಾಟ ನಡೆಯುತ್ತಿದೆ. ಪ್ರತ್ಯೇಕ ಪಾಲಿಕೆಯ ಕನಸು ಈ ವರ್ಷ ಚಿಗುರೊಡೆದಿದೆ. ಪ್ರತ್ಯೇಕ ಪಾಲಿಕೆಗೆ ಸರ್ವಪಕ್ಷಗಳ 82 ಸದಸ್ಯರು ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೆ, ಜಿಲ್ಲೆಯ ಎಲ್ಲ ಸಚಿವ, ಶಾಸಕರು ಬೆಂಬಲಿಸಿ ಇಚ್ಚಾಶಕ್ತಿ ಪ್ರದರ್ಶಿಸಿದ್ದು ವಿಶೇಷ. ಈಗಾಗಲೇ ಸರ್ಕಾರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಬೆಳಗಾವಿ ಅಽವೇಶನ, ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಽವೇಶನದ ಹಿನ್ನೆಲೆಯಲ್ಲಿ ಪ್ರತ್ಯೇಕ ಪಾಲಿಕೆ ವಿಷಯ ಕ್ಯಾಬಿನೆಟ್ ಮುಂದೆ ಬಂದಿಲ್ಲ. ಹೊಸ ವರ್ಷದ ಆರಂಭದಲ್ಲಿ ಕ್ಯಾಬಿನೆಟ್‌ನಲ್ಲಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಘೋಷಣೆಯಾಗುವ ನಿರೀಕ್ಷೆ ಇದೆ.
* ಧಾಮುಲ್‌ನಲ್ಲಿ ಕಮಲ ಬೆಂಬಲಿತರ ಕಹಳೆ:
ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಅವರನ್ನು ಸರ್ಕಾರ ಪದನಿಮಿತ್ತ ನಿದೇಶಕರನ್ನಾಗಿ ನೇಮಿಸಿತು. ನಂತರ ನಡೆದ ಅಧ್ಯಕ್ಷ ಚುನಾವಣೆ ಬಿಜೆಪಿ- ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಶಂಕರ ಮುಗದ ಮತ್ತು ಶಿವಲೀಲಾ ಕುಲಕರ್ಣಿ ಅಧ್ಯಕ್ಷ ಹುದ್ದೆಗೆ ಸ್ಪಽðಸಿದ್ದರು. ಅಂತಿಮವಾಗಿ ಬಿಜೆಪಿ ಬೆಂಬಲಿತ ಶಂಕರ ಮುಗದ ಒಕ್ಕೂಟದ ಚುಕ್ಕಾಣಿ ಹಿಡಿದರು. ಅವರು 5ನೇ ಬಾರಿ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಅಽಕಾರ ವಹಿಸಿಕೊಂಡಿದ್ದು ವಿಶೇಷ. ಉಪಾಧ್ಯಕ್ಷರಾಗಿ ಉತ್ತರ ಕನ್ನಡದ ಸುರೇಶ್ಚಂದ್ರ ಹೆಗಡೆ ಅವಿರೋಧವಾಗಿ ಆಯ್ಕೆಯಾದರು.
* ನಿಗಮ- ಮಂಗಳಿಗಳ ಅಧ್ಯಕ್ಷರು:
ಈ ವರ್ಷಾರಂಭದಲ್ಲಿ ಜಿಲ್ಲಾ ವ್ಯಾಪ್ತಿಯ ಕೆಲ ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ಆಯ್ಕೆ ನಡೆಯಿತು. ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಽಕಾರದ ಅಧ್ಯಕ್ಷರಾಗಿ ಶಾಕೀರ ಸನದಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾಗಿ ವಿಜಯಪುರದ ಸಂಗಮೇಶ ಬಬಲೇಶ್ವರ, ವಾಕರಸಾ ಸಂಸ್ಥೆಯ ಅಧ್ಯಕ್ಷರನ್ನಾಗಿ ಕಾಗವಾಡ ಶಾಸಕ ಭರಮಗೌಡ (ರಾಜು) ಕಾಗೆ ಅವರನ್ನು ನೇಮಕ ಮಾಡಲಾಯಿತು. ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾಗಿ ವಿನಯ ಕುಲಕರ್ಣಿ ಪುತ್ರಿ ವೈಶಾಲಿ ಕುಲಕರ್ಣಿ ನೇಮಕಗೊಂಡರು.