ಲೋಕಾಯುಕ್ತ ಬಲೆಗೆ ಬಿದ್ದ ಬಿಲ್ ಕಲೆಕ್ಟರ್

IMG-20240402-WA0142
Published on

ಅರಸೀಕೆರೆ: ಖಾತೆ ಬದಲಾವಣೆ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ 20 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ನಗರಸಭೆ ನೌಕರ ಮಂಗಳವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ಕಂದಾಯ ವಿಭಾಗದ ಬಿಲ್ ಕಲೆಕ್ಟರ್ ಜಯರಾಮ್ ಲೋಕಾಯುಕ್ತ ಬಲೆಗೆ ಬಿದ್ದ ನೌಕರ. ತಂದೆ ಹೆಸರಿನಿಂದ ಮಗನಿಗೆ ಖಾತೆ ಮಾಡಿಕೊಡುವಂತೆ ನಗರ ನಿವಾಸಿ ಶಫಿಜಾನ್ ಅವರಿಂದ 20 ಸಾವಿರ ರೂ.ಗೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಸಂತ್ರಸ್ತರು ನೀಡಿದ ದೂರಿನ ಹಿನ್ನೆಲೆಯಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಇನ್ಸ್‌ಪೆಕ್ಟರ್ ಬಾಲು ಹಾಗೂ ಶಿಲ್ಪಾ ಆರೋಪಿಯನ್ನು ನಗರಸಭೆ ಕಚೇರಿಯಲ್ಲಿ ನಗದು ಸಹಿತ ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net