

ಬೆಂಗಳೂರು: ಕರೊನಾ ಲಾಕ್ಡೌನ್ನಿಂದ ಸಂಚಾರಿ ಪೊಲೀಸರ ದಂಡ ಪ್ರಯೋಗದಿಂದ ಕೊಂಚ ನಿರಾಳರಾಗಿದ್ದ ವಾಹನ ಸವಾರರಿಗೆ ಲಾಕ್ಡೌನ್ ತೆರವುಗೊಂಡ ಬೆನ್ನಲ್ಲೇ ಪೊಲೀಸರ ಕೈನಿಂದ ತಪ್ಪಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.
ನಗರದಲ್ಲಿ ಭಾರಿ ಸಂಚಾರ ಉಲ್ಲಂಘನೆಯಾಗಿದ್ದು, ದಂಡ ವಸೂಲಿಗೆ ಇಳಿದಿರುವ ಸಂಚಾರಿ ಪೊಲೀಸರು ದಿನನಿತ್ಯ ಅನೇಕ ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಅದರಲ್ಲೂ ಕೆಲವರಂತೂ ಸಂಚಾರಿ ನಿಯಮ ಉಲ್ಲಂಘನೆಯನ್ನೇ ಕಾಯಕ ಮಾಡಿಕೊಂಡಿದ್ದಾರೆ. ಏಕೆಂದರೆ ಅನೇಕ ಸವಾರರ ಟ್ರಾಫಿಕ್ಸ್ ರೂಲ್ಸ್ ಬ್ರೇಕ್ ಚಲನ್ ನೋಡಿದ ಪೊಲೀಸರಿಗೇನೆ ಶಾಕ್ ಆಗಿದೆ.
ಹೌದು, ಇಂಥದ್ದೇ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಅರುಣ್ ಕುಮಾರ್ ಹೆಸರಿನ ಬೈಕ್ ಸವಾರನೊಬ್ಬ ಪೋಲೀಸರಿಗೆ ಸಿಕ್ಕಿ ಬಿದ್ದಿದ್ದು, ಬರೋಬ್ಬರಿ 77 ಬಾರಿ ರೂಲ್ಸ್ ಬ್ರೇಕ್ ಮಾಡಿದ್ದಾರೆ.
ಮಡಿವಾಳ ಸಂಚಾರಿ ಪೋಲೀಸ್ ಇನ್ಸ್‌ಪೆಕ್ಟರ್ ನವೀನ್ ಕುಮಾರ್ ಮತ್ತು ಪಿಎಸ್‌ಐ ಶಿವರಾಜ್ ಕುಮಾರ್ ಕಾರ್ಯಾಚರಣೆ ವೇಳೆ ಬೈಕ್ ಸವಾರ ಅರುಣ್ ಸಿಕ್ಕಿ ಬಿದ್ದಿದ್ದಾರೆ. ಸವಾರನಿಗೆ ಬರೋಬ್ಬರಿ 42500 ರೂ. ದಂಡ ವಿಧಿಸಿದ್ದಾರೆ.
ಬೈಕ್ ಸವಾರನಿಗೆ ನೋಟಿಸ್ ನೀಡಿ ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಂಡ ಕಟ್ಟಿ ಬೈಕ್ ಬಿಡಿಸಿಕೊಂಡು ಹೋಗಲು ಮಡಿವಾಳ ಪೊಲೀಸರು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್)