ಪ್ರತಿಭಟನೆಯಲ್ಲಿ ಮೋದಿಗೆ 'ಧಿಕ್ಕಾರ' ಎನ್ನುವ ಬದಲು 'ಜೈಕಾರ' ಕೂಗಿದ ಯುವಕರು! ಹೇ.. ಹೇ.. ಜೈ ಅನ್ನಬಾರದು...

protest bagalkote
Published on

ಬಾಗಲಕೋಟೆ: ಕೆಲವೊಮ್ಮೆ ತಿಳಿದೋ, ತಿಳಿಯದೆಯೋ ಎಡವಟ್ಟು ಆಗಿ ಅಲ್ಲಿದ್ದವರಿಗೆ ಮುಜುಗರ ತರಿಸುವ ಅನ್ನಿವೇಶ ಸೃಷ್ಟಿಯಾಗುತ್ತದೆ. ಇತಂಹದ್ದೇ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮರೇಗುದ್ದಿ ಕ್ರಾಸ್ ಬಳಿ ಸೋಮವಾರ ಸಂಭವಿಸಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುವ ವೇಳೆ ಯುವಕರು ಮೋದಿಗೆ 'ಜೈಕಾರ' ಕೂಗಿದ್ದಾರೆ.

ಪ್ರತಿಭಟನೆ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಕೂಗುತ್ತಾ, ಮೋದಿಗೆ ‘ಧಿಕ್ಕಾರ’ ಕೂಗುವ ಬದಲು ಯುವಕರು ‘ಜೈ’ ಎಂದು ಕೂಗಿದ್ದಾರೆ. ಕೂಡಲೇ 'ಹೇ... ಹೇ... ಜೈ ಅನ್ನಬಾರದು' ಎಂದು ರೈತ ಮುಖಂಡ ಹೇಳಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net