ವಕೀಲರು ಶ್ರಮಿಸಿದರೆ ಉತ್ತಮ ಸಮಾಜ ನಿರ್ಮಾಣ

23NGD4
Published on

ನಂಜನಗೂಡು: ನ್ಯಾಯಾಧೀಶರು ಮತ್ತು ವಕೀಲರು ನ್ಯಾಯಾಲಯದ ಅವಿಭಾಜ್ಯ ಅಂಗವಾದ್ದು, ವಕೀಲರು ಉತ್ತಮ ಕಾರ್ಯನಿರ್ವಹಣೆ ಮೂಲಕ ಶಾಂತಿಯುತ ಸಮಾಜ ನಿರ್ಮಾಣಕ್ಕೆ ನೆರವಾಗಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಅನುಪಮಾ ಲಕ್ಷ್ಮೀ ಹೇಳಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,
ನಂಜನಗೂಡಿನಲ್ಲಿ ವಕೀಲರ ಸಂಘ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ನ್ಯಾಯಾಲಯದ ಸುಗಮ ಕಾರ್ಯ ನಿರ್ವಹಣೆಗೆ ಇಲ್ಲಿನ ವಕೀಲರು ಅಗತ್ಯ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.


ಪ್ರಧಾನ ಸಿವಿಲ್ ನ್ಯಾಯಾಧೀಶ ರಘುರಾಂ ಮಾತನಾಡಿ, ಸಮಾಜದಲ್ಲಿ ವಕೀಲರು ಮಹತ್ವದ ಸ್ಥಾನವನ್ನು ಹೊಂದಿದ್ದು, ವೃತ್ತಿಯಲ್ಲಿ ಪಾವಿತ್ರತೆ ಕಾಯ್ದುಕೊಂಡು ಪ್ರಮಾಣಿಕವಾಗಿ ಸಮಾಜದ ಹಿತ ಕಾಪಾಡುವ ಗುರಿಯೊಂದಿಗೆ ಮುಂದೆ ಸಾಗಿದಲ್ಲಿ ಯಶಸ್ಸು ಸಾಧಿಸಬಹುದು ಎಂದರು.
ಇದೇ ಸಂದರ್ಭ ವಕೀಲರ ಸಂಘದ ಅಧ್ಯಕ್ಷ ಸುರೇಶ್ ಹಾಗೂ ಹಿರಿಯ ವಕೀಲ ಎಂ.ಎ.ಷಣ್ಮುಖ ಅವರನ್ನು ಸನ್ಮಾನಿಸಲಾಯಿತು.

ಒಂದನೇ ಅಪರ ಸಿವಿಲ್ ನ್ಯಾಯಧೀಶ ಕಿಶೋರ್‌ಕುಮಾರ್, ಎರಡನೇ ಅಪರ ನ್ಯಾಯಧೀಶೆ ಶಶಿಕಲಾ, ಸರ್ಕಾರಿ ವಕೀಲ ಬಿ.ನಂಜುಂಡಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net