

ಚನ್ನಮ್ಮನ ಕಿತ್ತೂರು: ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಸದುಪಯೋಗ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಪ್ರಸಕ್ತ ಶೆಣಿಕ ಸಾಲಿನ ಸಾಂಸತಿಕ, ಕ್ರೀಡಾ ಎನ್ಎಸ್ಎಸ್, ಸ್ಕೌಟ್ಸ್ ಮತ್ತು ಗೆಡ್ಸ್ , ರೆಡ್ ಕ್ರಾಸ್ ಟಕದ ಚಟುವಟಿಕೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜು ಜೀವನದ ಮುಖ್ಯ ಟ್ಟ. ಲಿತಾಂಶದಷ್ಟೇ ಬುದ್ಧಿವಂತಿಕೆಯೂ ಮುಖ್ಯವಾಗಿದೆ. ಪರಿಶ್ರಮಪಟ್ಟರೆ ಪ್ರತಿಲ ಸಿಗಲಿದೆ. ಪಾಲಕರ ಕನಸು ನನಸಾಗಿಸಲು ನಿರಂತರ ವ್ಯಾಸಂಗ ಮಾಡಬೇಕು. ಶಿಣದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಓದಿನ ಕಡೆ ಗಮನವಿರಲಿ. ನಿಮಗೆ ಬೇಕಾದ ಸವಲತ್ತುಗಳನ್ನು ಒದಗಿಸುತ್ತೇನೆ ಎಂದು ಭರವಸೆ ನೀಡಿದರು.
ಕರ್ನಾಟಕ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥ ಸುಭಾಸಚಂದ್ರ ನಾಟೀಕಾರ ಮಾತನಾಡಿ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ಹೋರಾಟ ಮಾಡಿದ ಸಾವಿತ್ರಿಬಾಯಿ ುಲೆ ಅವರನ್ನು ನೆನೆಯಬೇಕು. ಅವರ ಹೋರಾಟದ ಲವೇ ಹೆಣ್ಣು ಮಕ್ಕಳು ಶಾಲೆ ಕಲಿಯುವಂತಾಗಿದೆ. ಸಂವಿಧಾನ ಎಲ್ಲರಿಗೂ ಮುಕ್ತ ಅವಕಾಶ ನೀಡಿದೆ. ಎಲ್ಲರೂ ಉತ್ತಮ ಶಿಣ ಪಡೆದರೆ ಗುರಿ ಮುಟ್ಟಲು ಸಾಧ್ಯ ಎಂದು ಹೇಳಿದರು.
ಅಂತರ್ ವಿಶ್ವವಿದ್ಯಾಲಯದ ಕ್ರೀಡೆಯ ಟೇಬಲ್ ಟೆನಿಸ್ನಲ್ಲಿ ಆಯ್ಕೆಯಾದ ಗಾಯತ್ರಿ ಕಾಪೋಲಿ, ಚೆತ್ರಾ ಇಟಗಿ, ಕಾವ್ಯಾ ಮಂಡಾಣಿ ಹಾಗೂ ವಾಲಿಬಾಲ್ನಲ್ಲಿ ಗಾಯತ್ರಿ ಕಪೋಜಿ, ಪ್ರೀತಿ ಗೌಡರ, ಸುಜಾತಾ ಪೆನ್ನೆಕರ್, ಚೆತ್ರಾ ಇಟಗಿ, ತೇಜಸ್ವಿನಿ ಬನೋಶಿ, ಅನ್ನಪೂರ್ಣ ಹತ್ತಿಕಟಗಿ ಹಾಗೂ ಪ್ರದಿಪ ಮೇಲಿನಮನಿ ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಕಾಲೇಜಿನ ಪ್ರಾಂಶುಪಾಲೆ ಡಾ.ಕವಿತಾ ಕುಲಕರ್ಣಿ, ನರಸಿಂಹ ಗಲಗಲಿ, ಪುಂಡಲೀಕ ವಾಲೀಕಾರ, ಅಶ್ಪಾಕ್ ಹವಾಲ್ದಾರ್, ಮಹೇಶ ಶೆಟ್ಟರ, ಸುರೇಶ ಕಿತ್ತೂರ, ಅಲಿಯಾಖಾನ್ ಉಸ್ತಾದ, ಮಂಜು ದೊಡ್ಡಣ್ಣವರ, ಸಂಜು ಲೋಕಾಪುರ, ಕಾಲೇಜಿನ ಬೋಧಕ ಹಾಗೂ ಸಹ ಸಿಬ್ಬಂದಿ, ವಿದ್ಯಾರ್ಥಿಗಳು ಇತರರಿದ್ದರು.