

ಚಿಕ್ಕನಾಯಕನಹಳ್ಳಿ : ಸಮಾಜದಲ್ಲಿ ಪ್ರತಿಯೊಬ್ಬರು ಜವಾಬ್ದಾರಿಯಿಂದ ಹೆಜ್ಜೆ ಇಟ್ಟಾಗ ಮಾತ್ರ ಕಲಿಕೆಗೆ ಅರ್ಥ ಬರಲು ಸಾಧ್ಯ ಎಂದು ನವೋದಯ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ.ಚಂದ್ರಶೇಖರ್ ಹೇಳಿದರು.
ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸತಿಕ, ಕ್ರೀಡಾ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅಧ್ಯತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸದಾ ಹೊಸ ಹೊಸ ಆಲೋಚನೆಯನ್ನು ರೂಢಿಸಿಕೊಂಡಲ್ಲಿ ನಿಮ್ಮ ಮುಂದಿನ ಭವಿಷ್ಯದಲ್ಲಿ ಉತ್ತಮ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ವಿದ್ಯಾವಂತರಾದರೆ ಸಾಲದು ಪ್ರಾವಂತರಾದಾಗ ಸಮಾಜಕ್ಕೆ ಒಳ್ಳೆಯ ಪ್ರಜೆಗಳಗಾಲು ಸಾಧ್ಯವಾಗುತ್ತದೆ ಎಂದರು.
ತುರುವೇಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಪ್ರೊ.ಎಸ್.ಎಲ್.ವಿಜಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಂಸತಿಕ ಮತ್ತು ಕ್ರೀಡೆ ಮನಸ್ಸನ್ನು ಉತ್ತಮ ದಾರಿಯತ್ತ ಕರೆದೋಯ್ಯಲು ಸಹಕಾರಿಯಾಗುತ್ತದೆ ಎಂದರು.
ವಿದ್ಯಾಸಂಸ್ಥೆಯ ಖಜಾಂಚಿ ಎನ್.ಎನ್.ಶ್ರೀಧರ್, ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿ ಯೋಚಿಸಬೇಕು. ಕಲೆ ಮತ್ತು ವಿಜ್ಞಾನ ಒಂದೇ ರೂಪವಾಗಿದ್ದು, ತಾವು ಒಳ್ಳೆಯ ಭಾಷಾಜ್ಞಾನ ಬೆಳೆಸಿಕೊಂಡು ಸಮಾಜದಲ್ಲಿ ನಡೆದಾಗ ಒಳ್ಳೆಯ ಪ್ರಜೆಗಳಾಗಲು ಸಾಧ್ಯ ಎಂದರು.
ನವೋದಯ ಪಿಯು ಕಾಲೇಜಿನ ಪ್ರಾಶುಪಾಲ ಎಂ.ಎಸ್.ಮೋಹನ್ ಕುಮಾರ್, ಕಾತ್ರಿಕೇಹಾಳ್ ಸರ್ಕಾರಿ ಪಿಯುಕಾಲೇಜಿನ ಪ್ರಾಂಶುಪಾಲ ಸಿ.ಶಿವರುದ್ರಯ್ಯ, ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ರವಿಕುಮಾರ್ ಮಾತನಾಡಿದರು. ಪ್ರೊ.ಸದಾನಂದ ಸ್ವಾಮಿ, ವಿದ್ಯಾ, ಸಿದ್ದಲಿಂಗಮೂರ್ತಿ,ವಿದ್ಯಾರ್ಥಿಗಳಾದ ಕುಮಾರಿ ಚಂದ್ರಿಕಾ, ಬೇಬಿ, ಕಾಲೇಜಿನ ಬೋಧಕ -ಬೋಧಕೇತರ ವರ್ಗ ಇದ್ದರು.