

ಅಥಣಿ: ತಾಲೂಕಿನ ಮಧ್ಯಮ ವರ್ಗ ಮತ್ತು ಬಡವರಿಗೆ ಅನುಕೂಲವಾಗಲೆಂದು ಆರೋಗ್ಯ ಸಚಿವ ಆರೋಗ್ಯ ಸಚಿವ ದಿನೇಶ ಗುಂಡೂರಾವ 100 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಗುವಿನ ಸುಸಜ್ಜಿತ ಆಸ್ಪತ್ರೆಗೆ 30 ಕೋಟಿ ರೂ. ಅನುದಾನ ಒದಗಿಸಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿ ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಚಿಕ್ಕೋಡಿ ಮತ್ತು ಇಂಜಿನಿಯರಿಂಗ್ ಟಕ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಮೊದಲ ಹಂತದಲ್ಲಿ 50 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದ 10 ಉನ್ನತ ಸರ್ಕಾರಿ ಆಸ್ಪತ್ರೆಗಳಲ್ಲಿ ಅಥಣಿಯೂ ಒಂದಾಗಿರುವುದು ಹೆಮ್ಮೆಯ ಸಂಗತಿ. ಅದಲ್ಲದೆ 7 ಕೋಟಿ ರೂ. ವೆಚ್ಚದಲ್ಲಿ ಅಡಹಳ್ಳಿ, ಕೊಕಟನೂರ, ಸತ್ತಿ, ಸಂಕ್ರಟ್ಟಿ, ನದಿ ಇಂಗಳಗಾವ, ತೆಲಸಂಗ ಹಾಗೂ ಕಾಗವಾಡ ತಾಲೂಕಿನ ಮದಭಾವಿ, ಮಂಗಸೂಳಿ, ಶಿರಗುಪ್ಪಿ(ಜುಗೂಳ), ತಂಗಡಿ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು. 3 ಕೋಟಿ ರೂ. ವೆಚ್ಚದಲ್ಲಿ ಅಥಣಿ ತಾಲೂಕಿನ ಶಿನಾಳ, ದರೂರ, ರಡ್ಡೇರಹಟ್ಟಿ, ಖವಟಕೊಪ್ಪ, ಹಾಲಳ್ಳಿ, ಕೊಡಗಾನೂರ, ಕನ್ನಾಳ, ಎಲಿಹಡಲಗಿ, ಝಂಜುರವಾಡ, ಕೋಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲಾಗುವುದು ಎಂದರು.
ಸಾನ್ನಿಧ್ಯವಹಿಸಿದ್ದ ಕೌಲಗುಡ್ಡದ ಅಮರೇಶ್ವರ ಮಹಾರಾಜರು ಮಾತನಾಡಿ, ಬಡವರ ದೇವಾಲಯವೆಂದರೆ ಸರ್ಕಾರಿ ಆಸ್ಪತ್ರೆ ಎಂದರು. ಜಿಲ್ಲಾ ವೈದ್ಯಾಧಿಕಾರಿ ಡಾ.ಈಶ್ವರ ಗಡಾದ ಮಾತನಾಡಿ, ಹೆರಿಗೆ ಆಸ್ಪತ್ರೆ, ವೆಂಟಿಲೆಟರ್, ಆಕ್ಸಿಜನ್ ಪ್ಲಾಂಟ, ಹೊಸ ಉಪಕರಣಗಳಿಂದ ಉತ್ತಮ ಸೇವೆಗೆ ಅಥಣಿ ಸರ್ಕಾರಿ ಆಸ್ಪತ್ರೆ ಮಾದರಿಯಾಗಿದೆ ಎಂದರು.
ಶಾಸಕ ರಾಜು ಕಾಗೆ, ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ ಮಾತನಾಡಿದರು. ಚಿಕ್ಕೋಡಿ ಅಪರ ಜಿಲ್ಲಾ ವೆದ್ಯಾಧಿಕಾರಿ ಶರಣಪ್ಪ ಗಡೆದ, ತಹಸೀಲ್ದಾರ್ ಸಿದರಾಯ ಭೋಸಗಿ, ವೈದ್ಯರಾದ ಸಿ.ಎಸ್.ಪಾಟೀಲ, ಬಿ.ಎಸ್.ಕಲಮಡಿ, ವಿಜಯ ಕುರೆಣ್ಣವರ, ಆಶಾ ಗಾಡವಿ, ಚಿದಾನಂದ ಮೇತ್ರಿ, ಮುರುಗೇಶ ಅವಟಿ, ಚಂದ್ರಶೇಖರ ಧೂಳಶೆಟ್ಟಿ, ಶ್ರವಣಕುಮಾರ ಕರ್ಣಿ, ಪುರಸಭಾ ಅಧ್ಯೆ ಶಿವಲೀಲಾ ಬುಟಾಳೆ, ಉಪಾಧ್ಯೆ ಭುವನೇಶ್ವರಿ ಯಂಕಚ್ಚಿ, ಕಷ್ಣಾ ಕಾರ್ಖಾನೆ ನಿರ್ದೇಶಕ ಪರಪ್ಪ ಸವದಿ, ಸ್ಥಾಯಿ ಸಮಿತಿ ಅಧ್ಯ ದತ್ತಾ ವಾಸ್ಟರ್, ರಾಮಗೊಂಡ ಪಾಟೀಲ, ಸದಸ್ಯರಾದ ಸಂತೋಷ ಸಾವಡಕರ, ರಾವಸಾಬ ಐಹೊಳೆ, ನರಸು ಬಡಕಂಬಿ, ಕಲ್ಮೇಶ ಮಡ್ಡಿ, ರಾಜು ಗುಡೋಡಗಿ ಇತರರಿದ್ದರು.