

ಬಸವನಬಾಗೇವಾಡಿ: ಪ್ರತಿಯೊಬ್ಬರೂ ಮಾನವೀಯ ಮೌಲ್ಯ ಅಳವಡಿಸಿಕೊಂಡರೆ ಮಾತ್ರ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ನಂದಿಹಾಳ(ಪಿಯು) ಗ್ರಾಮದಲ್ಲಿ ಮಂಗಳವಾರ ಬೇಡರ ಕಣ್ಣಪ್ಪ ದೇವಸ್ಥಾನ ಸಮಿತಿಯಿಂದ ಹಮ್ಮಿಕೊಂಡಿದ್ದ ಬೇಡರ ಕಣ್ಣಪ್ಪ ದೇವಸ್ಥಾನ ಉದ್ಘಾಟನೆ, ವಾಲ್ಮೀಕಿ ಮಹರ್ಷಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಾಲ್ಮೀಕಿ ಮಹರ್ಷಿಗಳು ರಾಮಾಯಣ ರಚಿಸುವ ಮೂಲಕ ಮನುಷ್ಯರು ಹೇಗೆ ಬದುಕಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದರು.
ಭಕ್ತಿಯಿಂದ ಶಕ್ತಿ ಪಡೆದುಕೊಳ್ಳಲು ಸಾಧ್ಯ ಎಂಬುದನ್ನು ಬೇಡರ ಕಣ್ಣಪ್ಪ ತಿಳಿಕೊಟ್ಟಿದ್ದಾನೆ. ನಾನು ಚಿಕ್ಕವನಿದ್ದಾಗ ಡಾ. ರಾಜಕುಮಾರ ಅವರ ಬೇಡರ ಕಣ್ಣಪ್ಪ ಚಿತ್ರ ನೋಡಿ ಪ್ರೇರಿತನಾಗಿದ್ದೇನೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಂಬಲ ಬೆಲೆಯಲ್ಲಿ ತೊಗರಿ, ಜೋಳ, ರಾಗಿ ಖರೀದಿಸಲು ಮುಂದಾಗಿದು,್ದ ರೈತರು ಖರೀದಿ ಕೇಂದ್ರಗಳಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳ್ಳಬೇಕು ಎಂದರು.
ವಾಲ್ಮೀಕಿ ಗುರುಪೀಠದ ಡಾ. ಶ್ರೀ ಪ್ರಸಾನ್ನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ,ವಾಲ್ಮೀಕಿ ಮಹರ್ಷಿಗಳು ರಾಮಾಯಣ ರಚಿಸುವ ಮೂಲಕ ಅಣ್ಣ-ತಮ್ಮಂದಿರ ತ್ಯಾಗ, ಪ್ರೀತಿ ತಿಳಿಸಿದ್ದಾರೆ ಎಂದರು.
ಜಾತಿಗಿಂತ ವ್ಯಕ್ತಿ ಶ್ರೇಷ್ಠ ಎಂಬುದನ್ನು ಅಣ್ಣ ಬಸವಣ್ಣನವರು 12ನೇ ಶತಮಾನದಲ್ಲೇ ಹೇಳಿದ್ದಾರೆ. ಆದರೂ ಜಾತೀಯತೆ ಇನ್ನೂ ತಾಂಡವವಾಡುತ್ತಿರುವುದು ನೋವಿನ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಕಾರ್ಯಕ್ರಮ ಉದ್ಘಾಟಿಸಿದರು.
ಕೊಡೆಕಲ್ಲ ಮಠದ ಸಂಗಯ್ಯ ಸ್ವಾಮಿಗಳು, ಜಮ್ಮಲದಿನ್ನಿಯ ಸಿದ್ಧರಾಮ ದೇವರು, ಹುಣಶ್ಯಾಳ ( ಪಿ.ಬಿ) ಸಂಗನಬಸವ ಶ್ರೀಗಳು , ರಾಜನಾಳದ ಹುಚ್ಚಪ್ಪಮುತ್ಯಾ ಸಾನ್ನಿಧ್ಯ ವಹಿಸಿದ್ದರು.
ವಿಜಯಪುರ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಸಹಕಾರಿ ಮಹಾಮಂಡಲ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ರವಿ ನಾಯ್ಕೋಡಿ, ಮುಖಂಡರಾದ ಶಿವಪ್ಪ ಬಡಿಗೇರ, ಪರಸಪ್ಪ ಬಡಿಗೇರ, ರಾಜು ಮಾಸ್ತಾಳ, ಆನಂದ ಬಡಿಗೇರ, ನಾಗಪ್ಪ ಬಡಿಗೇರ, ಸುರೇಶ ಸಣ್ಣಮನಿ, ಪರಪ್ಪ ಕೊಲ್ಹಾರ, ಚನ್ನ ಗೌಡ ಪಾಟೀಲ, ರಾವತಪ್ಪ ಬೆಂಕಿ, ಮಲ್ಲಕಪ್ಪ ಕರಡಿ, ಮಲಕಾಜಿ ಬೆಂಕಿ, ಬಸವರಾಜ ಜಾಲಗೇರಿ, ಪ್ರಕಾಶ ಕೋಲಕಾರ, ಬಿ. ಎಸ್. ಗಸ್ತಿ, ನಿಜಪ್ಪ ಜಾರಸಂಗ, ಸಿದ್ದು ಸಜ್ಜನ, ದೇವಾನಂದ ಲಚ್ಯಾಣ, ಪ್ರಕಾಶ ರಾಗಪ್ಪಗೋಳ, ಸಿದ್ದಪ್ಪ ಕಣಮುಚ್ಚನಾಳ ಉಪಸ್ಥಿತರಿದ್ದರು.
ಅಶೋಕ ಗುಂಡಿನಮನಿ ಸ್ವಾಗತಿಸಿದರು. ಮಲ್ಲು ಹಡಪದ ನಿರೂಪಿಸಿದರು. ರಾಜು ರಾಘೇರಿ ವಂದಿಸಿದರು.