

ಮುಂಡಗೋಡ: ಗದ್ದೆಗೆ ಹೋಗಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ತಾಲೂಕಿನ ಜೋಗೇಶ್ವರಹಳ್ಳದ ಬಳಿ ಗುರುವಾರ ಬೆಳಗ್ಗೆ ನಡೆದಿದೆ.
ಸಿದ್ದು ಯಮಕರ ಎಂಬಾತ ಗದ್ದೆಯಲ್ಲಿನ ಬೋರ್‌ವೆಲ್ ಚಾಲೂ ಮಾಡಲು ತೆರಳಿದ್ದ ವೇಳೆ ಕರಡಿಯೊಂದು ದಾಳಿ ನಡೆಸಿ ಕಾಲು, ಕೈಗೆ ಕಚ್ಚಿ ಗಾಯಗೊಳಿಸಿದೆ. ಈ ವೇಳೆ ಸಿದ್ದು ಪ್ರಾಣ ಭಯದಿಂದ ಜೋರಾಗಿ ಕಿರುಚಾಟ ನಡೆಸಿದಾಗ ಅಕ್ಕ ಪಕ್ಕದ ಗದ್ದೆಯಲ್ಲಿದ್ದ ಜನ ಬಂದು ಕರಡಿಯನ್ನು ಓಡಿಸಿದ್ದಾರೆ. ಗಾಯಾಳುವನ್ನು ತಕ್ಷಣ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.