ಬೇಲಿ ಹಾಕುತ್ತಿದ್ದ ರೈತನ ಮೇಲೆ ಕರಡಿ ದಾಳಿ, ಕೂಗಾಟಕ್ಕೆ ಹೆದರಿದ ಜಾಂಭವಂತ

30 ylp 02 (karadi)
Published on

ಯಲ್ಲಾಪುರ: ಹೊಲದಲ್ಲಿ ಬೇಲಿ ಹಾಕುತ್ತಿದ್ದ ರೈತನ ಮೇಲೆ ಕರಡಿಯೊಂದು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಶುಕ್ರವಾರ ತಾಲೂಕಿನ ಕಿರವತ್ತಿ ಸಮೀಪದ ಕಂಚನಳ್ಳಿಯ ಮುಂಡವಾಡದಲ್ಲಿ ನಡೆದಿದೆ.

ಮುಂಡವಾಡ ಗ್ರಾಮದ ಪರಶುರಾಮ ದುಗ್ಗಾ ನಾಯ್ಕ ಗಾಯಗೊಂಡ ರೈತ.

ಇವರು ಹೊಲದಲ್ಲಿ ಬೇಲಿ ಹಾಕುತ್ತಿದ್ದಾಗ ಏಕಾಏಕಿ ಕರಡಿ ದಾಳಿ ಮಾಡಿದೆ. ಆ ವೇಳೆ ಕೂಗಿಕೊಂಡಿದ್ದರಿಂದ ಹೆದರಿದ ಕರಡಿ ಕಾಡಿಗೆ ಓಡಿಹೋಗಿದೆ. ಇದರಿಂದ ಪರಶುರಾಮ ದುಗ್ಗಾ ನಾಯ್ಕ ಅವರ ತಲೆಗೆ, ಮುಖಕ್ಕೆ, ಮೈ, ಕೈ ಮೇಲೆ ಭಾರಿ ಗಾಯಗಳಾಗಿವೆ.
ಗಾಯಾಳುವನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್​ಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net