ದನ ಮೇಯಿಸುತ್ತಿದ್ದವನ ಮೇಲೆ ಕರಡಿ ದಾಳಿ

Bear Attack
Published on

ಮುಂಡಗೋಡ: ಅರಣ್ಯದಲ್ಲಿ ದನ ಮೇಯಿಸುತ್ತಿದ್ದವನ ಮೇಲೆ ಏಕಾಏಕಿ ದಾಳಿ ನಡೆಸಿದ ಕರಡಿಯು ಬಲಗೈಯನ್ನು ಗಾಯಗೊಳಿಸಿದ ಘಟನೆ ತಾಲೂಕಿನ ಪಾಳಾ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಚಿಕ್ಕಪ್ಪ ನಿಂಗಪ್ಪ ಮಾವುರ ಎಂಬಾತ ಗಾಯಗೊಂಡಿದ್ದಾನೆ. ಅರಣ್ಯದಲ್ಲಿ ದನ ಮೇಯಿಸುತ್ತಿದ್ದಾಗ ಎರಡು ಮರಿಗಳೊಂದಿಗೆ ಬಂದ ಕರಡಿಯೂ ಚಿಕ್ಕಪ್ಪನ ಮೇಲೆ ದಾಳಿ ನಡೆಸುತ್ತಿದ್ದಂತೆ ಜೋರಾಗಿ ಕೂಗಾಡಿದ್ದಾನೆ. ಆಗ ಅಲ್ಲಿದ್ದ ಸುರೇಶ ಎಂಬುವವರು ಓಡಿ ಬಂದು ಬಡಿಗೆಯಿಂದ ಕರಡಿಗಳನ್ನು ಹೊಡೆದು ಓಡಿಸಿದ್ದಾರೆ.

ಕರಡಿಯ ದಾಳಿಯಿಂದ ಚಿಕ್ಕಪ್ಪನ ಬಲಗೈಗೆ ಗಾಯವಾಗಿದ್ದು, ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net