ವ್ಯಸನಮುಕ್ತಿ ನವಜೀವನಕ್ಕೆ ದಾರಿದೀಪ

Bdk_Addiction free
Published on

ಮುಳ್ಳೇರಿಯ: ಮದ್ಯ ವ್ಯಸನಿಗಳಿಗೆ ವ್ಯಸನಮುಕ್ತ ಹೊಸ ಜೀವನ ನೀಡಲು ಧರ್ಮಸ್ಥಳದ ಮದ್ಯವರ್ಜನ ಶಿಬಿರ ದಾರಿದೀಪವಾಗಿದೆ ಎಂದು ಆದೂರು ಪೊಲೀಸ್ ಠಾಣೆಯ ಎಸ್‌ಐ ಅನುರೂಪ್ ಹೇಳಿದರು.

ಮುಳ್ಳೇರಿಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 1878ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ, ಕಾಸರಗೋಡು ಜಿಲ್ಲೆಯಲ್ಲಿ 20 ಮದ್ಯವರ್ಜನ ಶಿಬಿರ ನಡೆದಿದ್ದು ಶೇ.90 ಉತ್ತಮ ಫಲಿತಾಂಶವಿದೆ. ಯೋಜನೆ ಹಲವು ಬಡ ಕುಟುಂಬದ ಕಣ್ಣೀರು ಒರೆಸುತ್ತಿದೆ. ವ್ಯಸನಮುಕ್ತ ಸಮಾಜ ನಿರ್ಮಾಣವೇ ಪೂಜ್ಯರ ಆಶಯ ಎಂದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ರತನ್ ಕುಮಾರ್ ನಾಯ್ಕ, ಅಧ್ಯಕ್ಷ ಶಿವಕೃಷ್ಣ ಭಟ್, ಕಾರಡ್ಕ ಗ್ರಾಪಂ ಅಧ್ಯಕ್ಷ ವಕೀಲ ಗೋಪಾಲಕೃಷ್ಣ ಕೆ, ಮುಂಡೋಳು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ರಘುರಾಮ ಬಲ್ಲಾಳ್, ಗಣೇಶ ಕಲಾ ಮಂದಿರದ ಅಧ್ಯಕ್ಷ ರಂಗನಾಥ ರಾವ್, ವೈದ್ಯ ವಿ.ವಿ.ರಮಣ, ಜನಜಾಗೃತಿ ವಲಯಾಧ್ಯಕ್ಷ ಸಂಜೀವ ಶೆಟ್ಟಿ ಮೊಟ್ಟೆಕುಂಜೆ, ಜನಜಾಗೃತಿ ವೇದಿಕೆ ಕಾಸರಗೋಡು ಜಿಲ್ಲಾ ಸ್ಥಾಪಕಾದ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ಉಪಸ್ಥಿತರಿದ್ದರು.

ಜನಜಾಗೃತಿ ವೇದಿಕೆಯ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಪ್ರಾಸ್ತಾವಿಕ ಮಾತನಾಡಿದರು. ಕಾಸರಗೋಡು ತಾಲೂಕು ಯೋಜನಾಧಿಕಾರಿ ಮುಖೇಶ್ ಸ್ವಾಗತಿಸಿದರು. ಕೊರಗಪ್ಪ ವಂದಿಸಿದರು. ಮೇಲ್ವಿಚಾರಕ ಸುರೇಶ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net