ವಿದ್ಯಾರ್ಥಿ, ಯುವಜನತೆಯ ಸಾಧನೆಗೆ ದಾರಿದೀಪ

hbr (5)
Published on

ಹೆಬ್ರಿ: ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು.

ಅಮೃತ ಭಾರತಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್‌ಕುಮಾರ್ ಶೆಟ್ಟಿ ಮಾತನಾಡಿ, ಕೆಂಪೇಗೌಡರ ಸಾಧನೆ ಅದ್ವಿತೀಯವಾದುದು. ಕೆಂಪೇಗೌಡರು ಬಾಲ್ಯದಲ್ಲಿಯೇ ಅದ್ಭುತ ನಾಯಕತ್ವದ ಕೌಶಲ ಹೊಂದಿದ್ದರು. ಗ್ರಾಮಗಳು, ಗ್ರಾಮ ಪಂಚಾಯಿತಿಗಳು ಇತ್ಯಾದಿಗಳನ್ನು ಒಳಗೊಂಡ ಅದ್ಭುತ ನಗರವನ್ನು ಕಟ್ಟಿ ನಾಡಪ್ರಭು ಎನಿಸಿಕೊಂಡವರು. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಈ ರೀತಿಯ ಸಾಧನೆಯನ್ನು ಮಾಡಿದ ಕೆಂಪೇಗೌಡರು ವಿದ್ಯಾರ್ಥಿಗಳಿಗೆ ಯುವಜನತೆಗೆ ಸಾಧನೆಗೆ ದಾರಿದೀಪ ಎಂದರು.

ಪ್ರಾಂಶುಪಾಲ ಪ್ರಕಾಶ್ ಜೋಗಿ ಹಾಗೂ ಸಿಬ್ಬಂದಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ವಿದ್ಯಾರ್ಥಿಗಳಾದ ಪ್ರಿಯಾಂಕಾ, ರಚಿತಾ, ತ್ರಿಷಾ ಶೆಟ್ಟಿ ನಾಡಪ್ರಭುವಿನ ಕುರಿತು ಭಾಷಣ ಮಾಡಿದರು. ಸಂಖ್ಯಾಶಾಸ್ತ್ರ ಉಪನ್ಯಾಸಕ ಚಂದ್ರಹಾಸ್ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net