ಮನುಕುಲದ ಉದ್ಧಾರಕ್ಕೆ ದಾರಿದೀಪ

A beacon for the salvation of mankind
ಲೋಕಾಪುರ ಬಸವೇಶ್ವರ ವತ್ತದಲ್ಲಿ ಹಡಪದ ಅಪ್ಪಣ್ಣ ಕ್ಷೇಮಾಭಿವದ್ಧಿ ಸಂಘದ ವತಿಯಿಂದ ಹಡಪದ ಅಪ್ಪಣ್ಣನವರ ಜಯಂತಿ ಆಚರಿಸಲಾಯಿತು. ಡಾ. ಬಸವರಾಜ ಹಿರೇಮಠ, ಸದಾಶಿವ ನಾವಿ, ಉಪಾಧ್ಯಕ್ಷ ಚಂದ್ರಶೇಖರ ಸೊಲ್ಲಾಪುರ, ರವಿ ಹಡಪದ, ರವಿ ಬೋಳಿಶೆಟ್ಟಿ ಇತರರು ಇದ್ದರು.
Published on

ಲೋಕಾಪುರ : ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಶರಣರಾಗಿದ್ದಾರೆ. ಅವರ ವಚನಗಳು ಹಾಗೂ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿದೀಪಗಳಾಗಿವೆ ಎಂದು ಡಾ. ಬಸವರಾಜ ಹಿರೇಮಠ ಹೇಳಿದರು.

ಪಟ್ಟಣದ ಬಸವೇಶ್ವರ ವತ್ತದಲ್ಲಿ ಹಡಪದ ಅಪ್ಪಣ್ಣ ಕ್ಷೇಮಾಭಿವದ್ಧಿ ಸಂಘದ ವತಿಯಿಂದ ಹಮ್ಮಿಕೊಂಡ ಹಡಪದ ಅಪ್ಪಣ್ಣನವರ 890 ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಹಡಪದ ಅಪ್ಪಣ್ಣ ಅವರು ಸಾಮಾಜಿಕ ಅಸಮಾನತೆ, ಅಸ್ಪಶತೆ, ಜಾತಿ ವ್ಯವಸ್ಥೆ, ಕಂದಾಚಾರ, ಮೂಢನಂಬಿಕೆ ವಿರುದ್ಧ ಹೋರಾಡಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ತಮ್ಮ ವಚನಗಳ ಮೂಲಕ ಶ್ರಮಿಸಿರುವುದು ಅವಿಸ್ಮರಣೀಯ ಎಂದರು.

ಹಡಪದ ಸಮಾಜದ ಅಧ್ಯಕ್ಷ ಸದಾಶಿವ ನಾವಿ ಮಾತನಾಡಿ, ಸಮಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ಶರಣರು, ಸಂತರು ದಾರ್ಶನಿಕರು, ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಹಡಪದ ಅಪ್ಪಣ್ಣನವರು ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಕಾಯಕ ತತ್ವದಡಿ ಬದುಕು ರೂಪಿಸಿಕೊಳ್ಳುವುದೇ ಶರಣರ ಆಶಯವಾಗಿತ್ತು ಎಂದರು.

ಹಡಪದ ಅಪ್ಪಣ್ಣ ಕ್ಷೇಮಾಭಿವದ್ಧಿ ಸಂಘದ ಸರ್ವಸದಸ್ಯರು ಹಾಗೂ ಲೋಕಾಪುರದ ಮುಖಂಡರು ಸೇರಿ ಬಸವೇಶ್ವರ, ವಾಲ್ಮೀಕಿ ಪ್ರತಿಮಗೆ ಪುಷ್ಪಾರ್ಚನೆ ಮಾಡಿದರು. ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಸಿಹಿ ಹಂಚಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಮಲ್ಲಯ್ಯನಗುಡ್ಡದ ಮಹಾರುದ್ರಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಉಪಾಧ್ಯಕ್ಷ ಚಂದ್ರಶೇಖರ ಸೊಲ್ಲಾಪುರ, ಕಾರ್ಯದರ್ಶಿ ರವಿ ಹಡಪದ, ಖಜಾಂಜಿ ಶಿವು ನಾವಿ, ಅಲ್ಲಾಸಾಬ ಯಾದವಾಡ, ಶಂಕರ ತೇಲಿ, ರವಿ ಬೋಳಿಶೆಟ್ಟಿ, ನಿಲೇಶ ಬನ್ನೂರ, ಸಂಗಮೇಶ ಪಲ್ಲೇದ, ಬೀರಪ್ಪ ಮಾಯಣ್ಣವರ, ಪ್ರಕಾಶ ಚುಳಕಿ, ಸದಾಶಿವ ಉದಪುಡಿ, ಮಾರುತಿ ರಂಗಣ್ಣವರ, ಗೋವಿಂದ ಕೌಲಗಿ, ಮಹೇಶ ಹುಗ್ಗಿ, ಯಮನಪ್ಪ ಹೊರಟ್ಟಿ, ಶಾಂತೇಶ ಬೋಳಿಶೆಟ್ಟಿ, ಚನ್ನಬಸು ಹುಬ್ಬಳ್ಳಿ, ಮುತ್ತು ಪತ್ತಾರ, ಡಾ. ಸಂತೋಷ ಶೆಟ್ಟರ, ಸದಾಶಿವ ಹಗ್ಗದ, ಬಸವರಾಜ ಅಂಗಡಿ, ಕಾಶಿನಾಥ ನಾವಿ, ಶಿವಾನಂದ ನಾವಿ, ವಿಠ್ಠಲ ನಾವಿ, ಅಭಿಷೇಕ ನಾವಿ, ಮಾಜಿ ಸೈನಿಕ ಸಿದ್ದಪ್ಪ ಹಡಪದ, ವೆಂಕಟೇಶ ನಾವಿ, ಈರಣ್ಣ ಯರಗಟ್ಟಿ, ರಾಜಶೇಖರ ಸೊಲ್ಲಾಪುರ, ಮಂಜು ನಾವಿ,ಹಡಪದ ಅಪ್ಪಣ್ಣ ಕ್ಷೇಮಾಭಿವದ್ಧಿ ಸಂಘದ ಸದಸ್ಯರು ಹಾಗೂ ಸಮಾಜದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net