

ಯಲಬುರ್ಗಾ: ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯನ್ನು ಲಕ್ಷಾಂತರ ಭಕ್ತರಿಗೆ ಪವಿತ್ರ ಕ್ಷೇತ್ರವನ್ನಾಗಿ ಮಾಡಿದ ಕೀರ್ತಿ ಶರಣಬಸಪ್ಪ ಅಪ್ಪನವರಿಗೆ ಸಲ್ಲುತ್ತದೆ ಎಂದು ಪ್ರವಚನಕಾರ ವಿಜಯಮಹಾಂತ ದೇವರು ಹೇಳಿದರು.
ತಾಲೂಕಿನ ಬಂಡಿಹಾಳದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಲಬುರಗಿ ಶರಣಬಸಪ್ಪ ಅಪ್ಪನವರ ಸಂತಾಪ ಸಭೆಯಲ್ಲಿ ಮಾತನಾಡಿದರು. ಶಿಕ್ಷಣದಿಂದ ವಂಚಿತರಾದ ಅನೇಕ ಬಡ ಮಕ್ಕಳ ಶಿಕ್ಷಣಕ್ಕೆ ದಾರಿದೀಪವಾಗಿದ್ದರು. ಶಿಕ್ಷಣ ಸಂಸ್ಥೆಗಳ ಆರಂಭ ಹಾಗೂ ಅನ್ನದಾಸೋಹ ಮೂಲಕ ಸಾಮಾಜ ಸೇವೆ ಮಾಡಿದರು. ಅವರ ಅಗಲಿಕೆ ಭಕ್ತರಲ್ಲಿ ನೋವುಂಟು ಮಾಡಿದೆ ಎಂದರು. ಪ್ರಮುಖರಾದ ವೀರಪ್ಪ ಬುಸಣ್ಣವರ್, ಕೊಟ್ರೇಶ್ ಶ್ರೀಗಿರಿ, ವೀರನಗೌಡ ಗೋಣಿ, ಶರಣಪ್ಪ ಬುಸನ್ನವರ್, ಮುದುಕಣ್ಣ ಸಂಗಣ್ಣವರ್, ಕಳಕನಗೌಡ ಪಾಟೀಲ್, ದೇವಪ್ಪ ಕರಿಗಾರ್ ಇತರರಿದ್ದರು.