ಮಕ್ಕಳಿಗೆ ದಾರಿದೀಪವಾದ ಜಿಲ್ಲಾ ಕೈಪಿಡಿ

FotoJet (1)
Published on

ಶಾಸಕ ನಂಜೇಗೌಡ ಹೇಳಿಕೆ | 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

 ಲಕ್ಕೂರು : ಶಾಲಾ&ಕಾಲೇಜು ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಪ್ರಾಧ್ಯಾಪಕ, ಲೇಖಕ ಡಾ.ಅರಿವು ಶಿವಪ್ಪ ಪ್ರಕಟಿಸಿರುವ ಕೋಲಾರ ಜಿಲ್ಲಾ ಕೈಪಿಡಿ ಪುಸ್ತಕವು ಉಪಯುಕ್ತವಾಗಿದ್ದು, ದಾನಿಗಳ ಮೂಲಕ ಚಿಕ್ಕತಿರುಪತಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಶಾಲೆಗಳಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಚಿಕ್ಕತಿರುಪತಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪ್ರೌಢಶಾಲೆಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೋಲಾರ ಜಿಲ್ಲಾ ಕೈಪಿಡಿ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.

ಚಿಕ್ಕತಿರುಪತಿಯಲ್ಲಿ ಪ್ರಾರಂಭವಾದ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿಯೊಂದು ಸರ್ಕಾರಿ ಶಾಲೆಯ ಮಕ್ಕಳಿಗೂ ತಲುಪಿಸುವ ಕಾರ್ಯಕ್ರಮವಾಗಬೇಕಾಗಿದೆ. ಡಾ.ಅರಿವು ಶಿವಪ್ಪ, ಮುಖಂಡರಾದ ವಿಜಯ್​ಕುಮಾರ್​, ಪಂಡಿತ್​ ಮುನಿವೆಂಕಟಪ್ಪ ಅವರ ಸಹಕಾರದಿಂದ ಈ ಪುಸ್ತಕ ಹೊರಬಂದಿದೆ. ವಿದ್ಯಾರ್ಥಿಗಳು ಪ್ರತಿನಿತ್ಯ ನಿಮ್ಮ ಶಿಕ್ಷಕರು ನೀಡುವಂತಹ ಹೋಮ್​ವರ್ಕ್​ನ ಬಗ್ಗೆ ಸಂಪೂರ್ಣ ಮಾಹಿತಿ ಈ ಪುಸ್ತಕದಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದರು. ಪ್ರಾಧ್ಯಾಪಕ, ಲೇಖಕ ಡಾ.ಅರಿವು ಶಿವಪ್ಪ ಮಾತನಾಡಿ, ಜಿಲ್ಲೆಯಲ್ಲಿ 1,500 ವರ್ಷಗಳಿಂದ ಸಾಧನೆ ಮಾಡಿರುವ 53 ಮಂದಿ ಸಾಧಕರು, ಜಿಲ್ಲೆಯ ಪ್ರಸಿದ್ಧ 53 ಸ್ಥಳಗಳ ಬಗ್ಗೆ ಜಿಲ್ಲಾ ಕೈಪಿಡಿ&2025 ಪುಸ್ತಕ ಪ್ರಕಟಿಸಲಾಗಿದೆ. ಮುಂದಿನ ವರ್ಷ ಉಳಿದಿರುವ ಸಾಧಕರು, ಪ್ರಸಿದ್ಧ ಯಾತ್ರಾ ಸ್ಥಳಗಳು, ಧಾರ್ಮಿಕ ಕೇಂದ್ರಗಳು, ಇತಿಹಾಸದ ಪುಟಗಳಲ್ಲಿ ದಾಖಲಾಗಿರುವವರ ಮಾಹಿತಿ ಒದಗಿಸಲಾಗುವುದು. ವಿದ್ಯಾರ್ಥಿಗಳ ಪಾಲಿಗೆ ಈ ಪುಸ್ತಕ ಪ್ರಮುಖ ತೀರುವು ನೀಡಲಿದೆ ಎಂದರು. ದಸಂಸ ಮುಖಂಡರಾದ ವಿಜಯ್​ಕುಮಾರ್​, ಪಂಡಿತ್​ ಮುನಿವೆಂಕಟಪ್ಪ, ಅಂಜನಿ ಸೋಮಣ್ಣ, ಜಿ.ವಿ.ಮಂಜುನಾಥ್​, ಎ.ಎಂ.ನಾರಾಯಣಪ್ಪ, ಎಟ್ಟಕೋಡಿ ಶಶಿಧರ್​, ನಾಗೇಶ್​, ತಿಪ್ಪಸಂದ್ರ ಶ್ರೀನಿವಾಸ್​, ಆರ್​.ವೆಂಕಟೇಶ್​, ಚಂದ್ರಕಲಾ, ಎಸ್​ಡಿಎಂಸಿ

ಅಧ್ಯಕ್ಷ ವೆಂಕಟೇಶ್​ ಮೂರ್ತಿ ಮುಖ್ಯಶಿಕ್ಷಕಿ ಗೀತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net