

ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ ಸಂಬಂಧ ನಾದಿನಿ ಮಾಲಾ ಮೇಲೆ ಪೊಲೀಸರ ಕಣ್ಣು ಬಿದ್ದಿದೆ.
ರೇಖಾರ ಪತಿ ಕದಿರೇಶ್ರ ಸಹೋದರಿ ಮಾಲಾ ಮೇಲೆ ಹಲವು ಕೇಸ್ಗಳಿವೆ. ಮುಂದಿನ ಚುನಾವಣೆಯಲ್ಲಿ ತನ್ನ ಮಗಳನ್ನ ನಿಲ್ಲಿಸುವ ಪ್ಲ್ಯಾನ್ ಮಾಲಾಗೆ ಇತ್ತು. ಮಗಳನ್ನ ನಿಲ್ಲಿಸಲು ರೇಖಾ ಕದಿರೇಶ್ ಅಡ್ಡಗಾಲಾಗಿದ್ರು. ಅಲ್ಲದೆ ರೇಖಾಗೂ ಓರ್ವ ಮಗಳು, ಮಗನಿದ್ದಾನೆ. ಹೀಗಾಗಿ ಕೊಲೆ ಮಾಡಿದ್ರೆ ಸುಲಭವಾಗಿ ತನ್ನ ಮಗಳನ್ನು ಚುನಾವಣೆಗೆ ನಿಲ್ಲಿಸಬಹುದೆಂದು ಯೋಜನೆ ಇತ್ತು ಎಂಬ ಅನುಮಾನ ಮೂಡಿದೆ. ರೇಖಾರ ಸಹಚರ ಪೀಟರ್ ಜತೆ ಮಾಲಾ ಚೆನ್ನಾಗಿದ್ದರು ಎಂದು ತಿಳಿದುಬಂದಿದೆ. ಸದ್ಯ ಮಾಲಾಳನ್ನ ಕಾಟನ್ಪೇಟೆ ಠಾಣೆಗೆ ಕರೆದೊಯ್ದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿರಿ ಬಡವರಿಗೆ ಊಟ ಕೊಡುತ್ತಿರುವಾಗಲೇ ರೇಖಾ ಕದಿರೇಶ್ನನ್ನು ಅಟ್ಟಾಡಿಸಿ ಕೊಂದ್ರು! ಇಲ್ಲಿದೆ ಭಯಾನಕ ರಹಸ್ಯ
ರೇಖಾ ಪತಿ ಕದಿರೇಶ್ನನ್ನು 3 ವರ್ಷದ ಹಿಂದೆ ಅವರ ಮನೆ ಬಳಿಯೇ ಹಾಡಹಗಲೇ ಶೋಭನ್ ಗ್ಯಾಂಗ್ ಕೊಲೆ ಮಾಡಿತ್ತು. ಈ ಘಟನೆ ಬೆಂಗಳೂರನ್ನೇ ಬೆಚ್ಚಿಬೀಳಿಸತ್ತು. ಇದೀಗ ರೇಖಾರನ್ನ ಅವರ ಸಹಚರರೇ ಹತ್ಯೆ ಮಾಡಿದ್ದಾರೆ ಎಂಬ ಶಂಕೆ ದಟ್ಟವಾಗಿದೆ. ಸಂಸದ ಪಿ.ಸಿ. ಮೋಹನ್ ಅವರ ಶಿಷ್ಯೆಯಾಗಿದ್ದ ರೇಖಾ ಕದಿರೇಶ್ 2010 ಮತ್ತು 2015ರಲ್ಲಿ ಎರಡು ಭಾರಿ ಛಲವಾದಿಪಾಳ್ಯ ಕಾರ್ಪೋರೇಟ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಡ್ಡಿ ವ್ಯವಹಾರವನ್ನೂ ನಡೆಸುತ್ತಿದ್ದರು. ಇಡೀ ವಾರ್ಡ್ ಅನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರು.