ಸಂಬಂಧಿಕರಿಂದಲೇ ಮಾಜಿ ಕಾರ್ಪೋರೇಟರ್​ ರೇಖಾ ಕೊಲೆ: ಅತ್ತಿಗೆ ಮತ್ತು ಮಗ ಅರೆಸ್ಟ್

rekha kadiresh murder
Published on

ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಭೀಕರ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ರೇಖಾರ ಪತಿ ಕದಿರೇಶ್​ರ ಅಕ್ಕ ಮಾಲಾ ಹಾಗೂ ಈಕೆಯ ಪುತ್ರ ಅರುಳ್ ಹತ್ಯೆಯಲ್ಲಿ ಭಾಗಿಯಾಗಿರುವುದು ತನಿಖೆಯಲಿ ದೃಢಪಟ್ಟಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಮೂರು ದಿನಗಳಿಂದ ಅರುಳ್​ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಕೊಲೆಯ ಒಳಸಂಚಿನಲ್ಲಿ ಮಾಲಾ ಹಾಗೂ ಅರುಳ್ ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗಿದೆ. ಹಂತಕರಿಗೆ ಹಣಕಾಸಿನ ನೆರವು ಮತ್ತು ನ್ಯಾಯಾಲಯದಲ್ಲಿ ಜಾಮೀನು ಒದಗಿಸುವ ಭರವಸೆಯನ್ನು ಇವರು ನೀಡಿದ್ದರು. ಪ್ರಮುಖ ಆರೋಪಿ ಪೀಟರ್ ಹಾಗೂ ಸೂರ್ಯನ ಜತೆ ಸೇರಿ ರೇಖಾ ಕೊಲೆಗೆ ಒಳಸಂಚು ರೂಪಿಸಿದ್ದರು. ಪ್ರಕರಣದಲ್ಲಿ ಅರುಳ್ ಪಾತ್ರವಿರುವ ಬಗ್ಗೆ ಪೊಲೀಸರಿಗೆ ಕೆಲ ಸಾಕ್ಷ್ಯಗಳೂ ಸಿಕ್ಕಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net