

ಆರ್.ಮುನಿರಾಜ್ ವೇಮಗಲ್
ಕೋಲಾರ ತಾಲೂಕು ವೇಮಗಲ್ ಪಟ್ಟಣದ ಸೊಸೈಟಿ ಚುನಾವಣೆ ಈ ಬಾರಿ ನಡೆಯದಂತೆ ಅವಿರೋಧ ಆಯ್ಕೆಗೆ ಜೆಡಿಎಸ್ ಪರಾಜಿತ ಅಭ್ಯರ್ಥಿ ಸಿ.ಎಂ.ಆರ್.ಶ್ರೀನಾಥ್, ನಾಗನಾಳ ಸೋಮಣ್ಣ, ಬೆಗ್ಲಿ ಸೂರ್ಯ ಪ್ರಕಾಶ್ ಸೇರಿ ಅನೇಕ ಮುಖಂಡರು ನಡೆಸಿದ ಕಸರತ್ತು, ತಂತ್ರಗಾರಿಕೆ ಯಾವುದೂ ಉಪಯೋಗವಾಗಲಿಲ್ಲ.
12 ಸ್ಥಾನಗಳಿಗೆ 84 ನಾಮಪತ್ರಗಳು ಸಲ್ಲಿಕೆಯಾಗಿದ್ದು, 5 ನಾಮಪತ್ರ ಅಸಿಂಧುವಾಗಿ 11 ನಾಮಪತ್ರಗಳನ್ನು ಹಿಂಪಡೆದರೆ, 68 ಸ್ಪರ್ಧಿಗಳು ಕಣದಲ್ಲಿದ್ದಾರೆ.
ಸಾಲಗಾರರ ೇತ್ರದ 11 ಸ್ಥಾನಗಳಲ್ಲಿ ಸಾಮಾನ್ಯ 5 ಸ್ಥಾನಗಳಿಗೆ 29, ಪರಿಶಿಷ್ಟ ಜಾತಿ 1 ಸ್ಥಾನಕ್ಕೆ‘5, ಪರಿಶಿಷ್ಟ ಪಂಗಡ 1 ಸ್ಥಾನಕ್ಕೆ 3, ಹಿಂದುಳಿದ ವರ್ಗ&ಎ 1 ಸ್ಥಾನಕ್ಕೆ 5, ಪ್ರವರ್ಗ ಬಿ&1 ಸ್ಥಾನಕ್ಕೆ 5, ಮಹಿಳಾ ಮೀಸಲು 2 ಸ್ಥಾನಕ್ಕೆ 7 ಹಾಗೂ ಸಾಲಗಾರರಲ್ಲದ ಕ್ಷೇತ್ರದ ಸಾಮಾನ್ಯ 1ಸ್ಥಾನಕ್ಕೆ 14 ನಾಮಪತ್ರಗಳು ಕಣದಲ್ಲಿ ಉಳಿದುಕೊಂಡಿದೆ.
ಚುನಾವಣೆ ಪೈಪೋಟಿ ಜೋರಾಗಿ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಆದರೆ ಇಲ್ಲಿ ಮೈತ್ರಿ ಮುಂದುವರಿಯುವುದೇ ಅಥವಾ ಬೇರೆ ಬೇರೆಯಾಗಿ ಚುನಾವಣೆ ಎದುರಿಸುವರೇ ಎಂದು ಕಾದು ನೋಡಬೇಕಿದೆ. 3 ಕಡೆ ಒಕ್ಕಲಿಗರ ಪ್ರಾಬಲ್ಯ ಅಧಿಕವಾಗಿದ್ದು, ಎಪಿಎಂಸಿ, ಡಿಸಿಸಿ ಬ್ಯಾಂಕ್ ಹಾಗೂ ಸಹಕಾರಿ ಸಂದ ಚುನಾವಣೆಯಲ್ಲಿ ಜೆಡಿಎಸ್ನವರೇ ಜಯಗಳಿಸುತ್ತಾರೆ ಎಂಬ ಮಾತುಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತಿವೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಸಿ.ಎಂ.ಆರ್.ಶ್ರೀನಾಥ್ ಮೇಲೆ ಅಸಮಾಧಾನಗೊಂಡು ಕೆಲವು ಮುಖಂಡರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದರು.
ಮಾಜಿ ಸಚಿವ ವರ್ತೂರ್ ಪ್ರಕಾಶ್ ಬಿಜೆಪಿ ಸೇರಿದ್ದರು. ಅದರ ಜತೆಗೆ ಅವರದ್ದೇ ಆದ ಬಣವಿದೆ. ಪ್ರಬಲ ಆಕಾಂಗಳೊಂದಿಗೆ ಚುನಾವಣೆ ಎದುರಿಸುವ ಎಲ್ಲ ಲಕ್ಷಣಗಳು ಕೇಳಿ ಬರುತ್ತಿವೆ.
ಮುಖಂಡರ ತಂತ್ರಗಾರಿಕೆ ವಿಫಲ
ನಾಮಪತ್ರ ಸಲ್ಲಿಸಿದ ಪ್ರತಿಯೊಬ್ಬ ಅಭ್ಯರ್ಥಿಗಳೊಂದಿಗೆ ಮುಖಂಡರು ಚರ್ಚಿಸಿ ನಾಮಪತ್ರ ಹಿಂಪಡೆಯುವ ಪತ್ರಗಳಿಗೆ ಸಹಿ ಹಾಕಿಸಿದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ 3 ಪಕ್ಷಗಳಿಗೆ ಸಮಾನವಾಗಿ ನಾಲ್ಕು, ನಾಲ್ಕು ಸ್ಥಾನಗಳನ್ನು ಹಂಚಲಾಯಿತು. ಪ್ರತಿಯೊಬ್ಬರೂ ಒಪ್ಪಿದ್ದರು. ಆದರೆ, ಕೊನೆಯಲ್ಲಿ ಆಯಾ ಪಗಳ ಸದಸ್ಯರನ್ನು ಗುರುತಿಸಿ ಪಟ್ಟಿ ಘೋಷಣೆ ಮಾಡಿದಾಗ ನೀವು ನಿರ್ಧಾರ ಮಾಡಿ ಘೋಷಣೆ ಮಾಡಿರುವ ಅಭ್ಯರ್ಥಿಗಳು ನಮಗೆ ಸಮ್ಮತವಿಲ್ಲ, ಚುನಾವಣೆಯ ನಡೆಯಲಿ ಎಂದು ಮುಖಂಡರ ಮೇಲೆ ಕಿರುಚಾಡಿ ಆಕಾಂಕ್ಷಿಗಳು ಹೊರಟು ಹೋದರು.
ಮುಖಂಡರದ ಅಭಿಪ್ರಾಯ
ಚುನಾವಣೆ ನಡೆದಾಗ ಮಾತ್ರ ಮುಖಂಡರಿಗೆ ಮತದಾರರ ಬೆಲೆ ತಿಳಿಯುತ್ತದೆ. ಅವಿರೋಧ ಆಯ್ಕೆಯಾದರೆ ಮತದಾರ ಬೆಲೆಯೂ ತಿಳಿಯುವುದಿಲ್ಲ, ಮತದಾರರನ್ನು ಮಾತನಾಡಿಸುವುದೂ ಇಲ್ಲ. ಅಧಿಕಾರಕ್ಕಾದರೂ ಮುಂದಿನ 5 ವರ್ಷ ಮತದಾರರು ಸೊಸೈಟಿಗೆ ಬಂದಾಗ ಹೋದಾಗ ಮಾತನಾಡಿಸುತ್ತಾರೆ ಎಂಬುದು ಮುಖಂಡರ ಮಾತು.