ಸಾಣಿಕೆರೆಯಲ್ಲಿ ಸಮಸ್ಯೆಗಳ ಸುರಿಮಳೆ

CLK SANIKERE 05
Published on

ಚಳ್ಳಕೆರೆ: ಶುದ್ಧ ನೀರಿನ ಘಟಕ ಕೆಟ್ಟಿದೆ. ವಿದ್ಯುತ್ ಪೂರೈಕೆ ವ್ಯತ್ಯಯ ಕೃಷಿ ಕ್ಷೇತ್ರಕ್ಕೆ ಸಂಕಷ್ಟ ತಂದೊಡ್ಡಿದೆ. ಹಕ್ಕುಪತ್ರ ಸಿಕ್ಕಿಲ್ಲ. ಪಡಿತರ ಚೀಟಿ ಕೊಡುತ್ತಿಲ್ಲಲ. ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ಬಿಡುಗಡೆ ಆಗಿಲ್ಲ. ಗ್ಯಾರಂಟಿ ಯೋಜನೆಗಳು ಕೆಲವರಿಗೆ ಲಭಿಸಿಲ್ಲ…

ಸಾಣಿಕೆರೆ ಗ್ರಾಮದಲ್ಲಿ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಕುಂದು-ಕೊರತೆ ಸಭೆಯಲ್ಲಿ ಜನರು ಸಮಸ್ಯೆಗಳ ಸುರಿಮಳೆ ಸುರಿಸಿದರು.

ಜನರ ಸಮಸ್ಯೆ ಆಗಲಿಸಿದ ರಘುಮೂರ್ತಿ, ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಫಲಾನುಭವಿಗಳಿಗೆ ತಲುಪಿಸಲು ತಾಲೂಕು ಆಡಳಿತ ನಿಗಾ ವಹಿಸಬೇಕು ಎಂದು ತಹಸೀಲ್ದಾರ್ ರೇಹಾನ್ ಪಾಷಾ ಅವರಿಗೆ ಸೂಚಿಸಿದರು.

ಬರಪೀಡಿತ ತಾಲೂಕು ಎಂದು ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ಸರ್ಕಾರದ ಹಂತದಲ್ಲಿ ಚರ್ಚಿಸಿ ಎರಡು ಗಂಟೆಗಳ ಕಾಲ ಹೆಚ್ಚಿಗೆ ಕೃಷಿ ಕ್ಷೇತ್ರಕ್ಕೆ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಡ ತರಲಾಗುವುದು ಎಂದು ಭರವಸೆ ನೀಡಿದರು.

ಬೆಳೆನಷ್ಟ ಪರಿಹಾರ ಸಿಗಲಿದೆ. ಈಗಾಗಲೇ ಬರದ ಪರಿಸ್ಥಿತಿಯ ಅಧ್ಯಯನಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ ಎಂದ ಶಾಸಕರು, ಶುದ್ಧ ಕುಡಿಯುವ ನೀರಿನ ಘಟಕಗಳ ರಿಪೇರಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸೂಚಿಸಿದರು.

ಕೆಲ ಮೂಲ ಸೌಕರ್ಯ ಮತ್ತು ಸ್ವಚ್ಛತಾ ಕಾರ್ಯಗಳಿಗೆ ಪಂಚಾಯಿತಿ ಹಂತದಲ್ಲಿ ಕ್ರಮ ಕೈಗೊಳ್ಳುವಂತೆ ಗ್ರಾಪಂ ಆಡಳಿತಕ್ಕೆ ತಿಳಿಸಿದರು.

ಗ್ರಾಪಂ ಅಧ್ಯಕ್ಷ ಬಿ.ನಾಗರಾಜ, ಉಪಾಧ್ಯಕ್ಷೆ ಟಿ. ಶಶಿಕಲಾ, ಸದಸ್ಯರಾದ ಎಸ್. ತಿಪ್ಪೇರುದ್ರಪ್ಪ, ಎಂ. ಅಂಜು, ಕರಿಯಣ್ಣ, ಶ್ರುತಿ, ಶ್ರೀಧರ, ತಿಪ್ಪೇಸ್ವಾಮಿ, ರಂಜಿತಾ, ಸಿದ್ದಮ್ಮ, ಕರಿಯಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net