

ಬೆಂಗಳೂರು: ಟೆಕ್ಕಿಯೊಬ್ಬ ಪೋರ್ನ್ ವೆಬ್ಸೈಟ್ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದಾಗ "ತನ್ನ ಗೆಳತಿಯ ಜತೆ ತಾನು ಕಳೆದ ಖಾಸಗಿ ಕ್ಷಣದ ವಿಡಿಯೋ'' ಕಂಡು ನಿಬ್ಬೆರಗಾಗಿದ್ದಾನೆ. ತನ್ನ ಖಾಸಗಿ ಕ್ಷಣವನ್ನ ಸೆರೆ ಹಿಡಿದಿದ್ದಾರು? ಅಪ್ಲೋಡ್ ಮಾಡಿದ್ದಾರು? ಎಂದು ಗೊತ್ತಿಲ್ಲದೆ ಕಂಗೆಟ್ಟ ಯುವಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪ್ರತಿಷ್ಠಿತ ಕಂಪನಿಯಲ್ಲಿ ಸ್ಟಾಫ್ಟ್ವೇರ್ ಇಂಜಿನಿಯರ್ ಆಗಿರುವ ಆಸ್ಟಿನ್ ಟೌನ್ನ ನಿವಾಸಿ 25 ವರ್ಷದ ಯುವಕ, ತನ್ನ ಗೆಳತಿ ಜತೆ ಬೆಂಗಳೂರಿನ ಹೋಟೆಲ್ವೊಂದರಲ್ಲಿ ದೈಹಿಕ ಸಂಪರ್ಕ ನಡೆಸಿದ್ದ. ಟೆಕ್ಕಿಯ ಗಮನಕ್ಕೆ ಬಾರದಂತೆ ಆ ದೃಶ್ಯಗಳನ್ನು ಯಾರೋ ಕಿಡಿಗೇಡಿಗಳು ಸೆರೆ ಹಿಡಿದು, ವಿವಿಧ ಅಶ್ಲೀಲ ವೆಬ್ಸೈಟ್ಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಜ.21ರಂದು ಆ ಯುವಕ ಅಶ್ಲೀಲ ವೆಬ್ಸೈಟ್ನಲ್ಲಿ ಪೋರ್ನ್ ವಿಡಿಯೋ ವೀಕ್ಷಣೆ ಮಾಡುತ್ತಿದ್ದಾಗ "ತನ್ನ ಗೆಳತಿ ಜತೆ ದೈಹಿಕ ಸಂಪರ್ಕ ನಡೆಸಿದ ವಿಡಿಯೋ ಕಂಡು ಬಂದಿತ್ತು.
ಆತಂಕಗೊಂಡು ಬೇರೆ ಪೋರ್ನ್ ವೆಬ್ಸೈಟ್ ಪರಿಶೀಲಿಸಿದಾಗ ಅದರಲ್ಲೂ ಆತನ ವಿಡಿಯೋ ಅಪ್ಲೋಡ್ ಆಗಿರುವುದು ಕಂಡು ಬಂದಿದೆ. ಅರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ಟೆಕ್ಕಿ ದೂರು ನೀಡಿದ್ದಾನೆ. ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿಯೇ ಚಿತ್ರೀಕರಿಸಿ ಅಪ್ಲೋಡ್ ಮಾಡಿರುವ ಸಾಧ್ಯತೆಗಳಿವೆ ಎಂದು ಯುವಕ ದೂರಿನಲ್ಲಿ ಆರೋಪಿಸಿದ್ದಾನೆ.