ರಾತ್ರೋರಾತ್ರಿ ರಸ್ತೆ ಗುಂಡಿಗಳನ್ನು ಮುಚ್ಚಿದ ಬಿಬಿಎಂಪಿ

road
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಪ್ರಮುಖ ರಸ್ತೆ, ವಾರ್ಡ್ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲಾಗುತ್ತಿದ್ದು, ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ಸುಗಮ‌ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

ಸೆ.9 ರಂದು ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಮೈಸೂರು ರಸ್ತೆ, ನಾಯಂಡಹಳ್ಳಿ ಜಂಕ್ಷನ್, ನಾಗರಬಾವಿ ಸರ್ವೀಸ್ ರಸ್ತೆಯಿಂದ ನಾಯಂಡಹಳ್ಳಿ ರಿಂಗ್​ರಸ್ತೆ ಕಡೆ ಬರುವ ಸರ್ವೀಸ್ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ಮಳೆ ಬಿದ್ದಾಗ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಇದರಿಂದ ವಾಹನ ಸಂಚಾರದ ವೇಳೆ ಸಂಚಾರ ದಟ್ಟಣೆಯಾಗುತ್ತಿದೆ. ವಾಹನ ಸವಾರರಿಗೆ ಹೆಚ್ಚು ಸಮಸ್ಯೆ ಆಗಲಿದ್ದು, ತ್ವರಿತವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ತಿಳಿಸಿದ್ದರು.

ಅದರಂತೆ ಪಾಲಿಕೆಯ ಸಂಚಾರಿ ಇಂಜಿನಿಯರಿಂಗ್ ವಿಭಾಗವು ಕ್ರಮ ಕೈಗೊಂಡು ರಾತ್ರಿವೇಳೆ ಅಗತ್ಯ ಸಿಬ್ಬಂದಿ ಹಾಗೂ ಯಂತ್ರೋಪಕರಣದಿಂದ ದುರಸ್ತಿ ಕಾಮಗಾರಿ ನಡೆಸಿ ಬೆಳಗ್ಗೆ 2.30ರ ವೇಳೆಗೆ ಡಾಂಬರು ಹಾಕಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ದುರಸ್ತಿ ಕಾಮಗಾರಿ ವೇಳೆ ಪಾಲಿಕೆ ಇಂಜಿನಿಯರ್, ಸಂಚಾರಿ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದು, ರಸ್ತೆ ಮೇಲೆ ನೀರು ನಿಲ್ಲದಂತೆ ಶೋಲ್ಡರ್ ಡ್ರೈನ್ ಮೂಲಕ ರಾಜಕಾಲುವೆಗೆ ಸರಾಗವಾಗಿ ನೀರು ಹರಿದು ಹೋಗುವಂತೆ ಡಾಂಬರನ್ನು ಅಳವಡಿಸಲಾಗಿರುತ್ತದೆ.

ಪಾಲಿಕೆಯ 8 ವಲಯಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದ್ದು, ಸೆ.10ರಂದು ಜರಗನಹಳ್ಳಿ, ಬನಶಂಕರಿ 2ನೇ ಹಂತ, ಹೆಚ್.ಎಂ.ಟಿ ಲೇಔಟ್, ಯಡಿಯೂರು, ಬೆಳ್ಳಂದೂರು, ಸಿದ್ದಣ್ಣ ಲೇಔಟ್, ತಿಗರಳ ಪಾಳ್ಯ(ಹೂಡಿ), ನ್ಯೂ ಬಿ.ಇ.ಎಲ್ ರಸ್ತೆ, ಭೂಪಸಂದ್ರ, ಹೆಬ್ಬಾಳ ಮುಖ್ಯರಸ್ತೆ ಸೇರಿದಂತೆ ಇನ್ನಿತರೆ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲಾಗಿದೆ. ಉಳಿದಂತೆ ನಗರದ ಎಲ್ಲ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net