ಬಳ್ಳಾರಿಯಲ್ಲಿ ದುರ್ಘಟನೆ: ಪ್ರಿಯತಮೆ ಸಾವಿನ ಬೆನ್ನಲ್ಲೇ ಪ್ರಿಯಕರ ಆತ್ಮಹತ್ಯೆ

New Project(18)
Published on

ಬಳ್ಳಾರಿ: ಪ್ರಿಯತಮೆ ಸಾವಿನ ಬೆನ್ನಲ್ಲೇ ಪ್ರಿಯಕರ ನೇಣಿಗೆ ಶರಣಾದ ಘಟನೆ ಬಳ್ಳಾರಿಯ ಪಟೇಲ್ ನಗರದಲ್ಲಿ ಸಂಭವಿಸಿದೆ.

ಮಂಜುನಾಥ್(34) ಆತ್ಮಹತ್ಯೆ ಮಾಡಿಕೊಂಡವ. ಈತನ ಪ್ರಿಯತಮೆ ನಾಸಿಯಾ ಬಾನು ಕಳೆದ ವಾರ ನೇಣಿಗೆ ಶರಣಾಗಿದ್ದಳು. ಮನನೊಂದ ಮಂಜುನಾಥ್​, ಡೆತ್​ನೋಟ್​ ಬರೆದಿಟ್ಟು ಸಾವಿನ ಮನೆಯ ಕದ ತಟ್ಟಿದ್ದಾನೆ.

ನಾಸಿಯ ಬಾನುಗೆ ಈ ಮೊದಲೇ ಬೇರೊಬ್ಬರ ಜತೆ ಮದುವೆ ಆಗಿ ಮಗು ಇತ್ತು. ದಾಂಪತ್ಯದಲ್ಲಿ ಬಿರುಕು ಮೂಡಿದ್ದರಿಂದ ಡಿವೋರ್ಸ್​ ಪಡೆದು ಗಂಡನಿಂದ ದೂರವಾಗಿದ್ದಳು. ಬಳಿಕ ಮಂಜುನಾಥ್​ ಮತ್ತು ನಾಸಿಯಾ ಬಾನು ನಡವೆ ಪ್ರೀತಿ ಮೂಡಿತ್ತು. ಮೂರ್ನಾಲ್ಕು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರು ಮದುವೆ ಮಾಡಿಕೊಳ್ಳಲೂ ಮುಂದಾಗಿದ್ದರು.

ಮದುವೆ ಆಗವೇಕು ಅಂದುಕೊಳ್ಳುವಷ್ಟರಲ್ಲಿ ಇಬ್ಬರ ನಡುವೆ ಮನಸ್ತಾಪ ಬಂದು ನಾಸಿಯಾ ಬಾನು ಆತ್ಮಹತ್ಯೆಗೆ ಶರಣಾಗಿದ್ದಳು. ಪ್ರಿಯತಮೆ ಸಾವಿಂದ ಕಂಗೆಟ್ಟ ಮಂಜುನಾಥ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net