ರೈಲಿನಲ್ಲಿ ಆಭರಣವಿದ್ದ ಬ್ಯಾಗ್ ಕಳ್ಳತನ

crime
Published on

ಹುಬ್ಬಳ್ಳಿ: ಸಿದ್ದಗಂಗಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವ ವೇಳೆ ಯಲವಿಗೆ ರೈಲ್ವೆ ನಿಲ್ದಾಣದಲ್ಲಿ 2.79 ಲಕ್ಷ ರೂ. ಮೌಲ್ಯದ ಆಭರಣವಿದ್ದ ಬ್ಯಾಗ್ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ರಿಯಾಜ್ ಅಹ್ಮದ್ ಸೂರಣಗಿ ಎಂಬುವರ ಆಭರಣ ಕಳ್ಳತನವಾಗಿದೆ. ಧಾರವಾಡ ರೈಲ್ವೆ ಪೊಲೀಸರು ಕರೆ ಮಾಡಿ ಬ್ಯಾಗ್ ಸಿಕ್ಕಿದೆ ಎಂದು ತಿಳಿಸಿದ್ದು, ಬೆಳಗ್ಗೆ ಹೋಗಿ ಬ್ಯಾಗ್ ತೆಗೆದು ನೋಡಿದಾಗ ಅದರಲ್ಲಿದ್ದ ಬಂಗಾರದ ಆಭರಣಗಳು ಇರಲಿಲ್ಲ. ರೈಲ್ವೆ ಪೊಲೀಸರು ಬ್ಯಾಗ್ ಸಿಕ್ಕಾಗ ಆಭರಣ ಇರಲಿಲ್ಲ ಎಂದು ತಿಳಿಸಿದ್ದಾರೆ. ಆಭರಣ ಹುಡುಕಿ ಕೊಡುವಂತೆ ರಿಯಾಜ್, ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net